More

    ರಾಜಸ್ಥಾನ ಚುನಾವಣೆ| 23 ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಗೆಹ್ಲೋಟ್​ ಬೆಂಬಲಿಗರಿಗೆ ಶಾಕ್

    ನವದೆಹಲಿ: ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ 1923 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

    ಬಿಡುಗಡೆಯಾಗಿರುವ ಆರನೇ ಪಟ್ಟಿಯಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಬೆಂಬಲಿಗರಾದ ಮಹೇಶ್​ ಜೋಶಿ, ಶಾಂತಿ ಧರಿವಾಲ್​ ಹಾಗೂ ಧರ್ಮೆಂದ್ರ ರಾಥೋರ್​ಗೆ ಟಿಕೆಟ್​ ಕಾಂಗ್ರೆಸ್​ ಹೈಕಮಾಂಡ್​ ಟಿಕೆಟ್​ ನಿರಾಕರಿಸಿದೆ. ಈ ಮೂಲಕ ಅಶೋಕ್​ ಗೆಹ್ಲೋಟ್​ ಬಣದ ವಿರುದ್ಧ ಸಚಿನ್​ ಪೈಲಟ್​ ಮೇಲುಗೈ ಸಾಧಿಸಿದಂತಾಗಿದೆ.

    ಕಳೆದ ವರ್ಷ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷರಾಗುವುದು ಖಚಿತವಾಗುತ್ತಿದ್ದಂತೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿತ್ತು. ಅಶೋಕ್​ ಗೆಹ್ಲೋಟ್​ ರಾಜೀನಾಮೆ ವದಂತಿ ಬೆನ್ನಲ್ಲೇ ಈ ಮೂವರು ನಾಯಕರು ಸಸಿನ್​ ಪೈಲಟ್​ರನ್ನು ಸಿಎಂ ಮಾಡದಂತೆ ಬಂಡಾಯ ಎದ್ದಿದ್ದರು ಮತ್ತು ಶಾಸಕಾಂಗ ಸಭೆ ನಡೆಸುವಂತೆ ಕಾಂಗ್ರೆಸ್​ ಹೈಕಮಾಂಡ್​ ಮೇಲೆ ಒತ್ತಡಬ ಹೇರಿದ್ದರು. ಇದಲ್ಲದೆ ಅಂದಿನ ರಾಜ್ಯ ಕಾಂಗ್ರೆಸ್​ ಉಸ್ತುವಾರಿಯಾಗಿದ್ದ ಅಜಯ್​ ಮಾಕೆನ್​ ಅವರ ರಾಜೀನಾಮೆಗೂ ಈ ಮೂವರು ಪ್ರಮುಖ ಕಾರಣಕರ್ತರೆಂದು ಹೇಳಲಾಗಿದೆ. ಈ ಕಾರಣಕ್ಕೆ ಟಿಕೆಟ್​ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ರೇವ್​ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ; ಪ್ರಮುಖ ಆರೋಪಿ ಎಲ್ಷಿಶ್​ ಯಾದವ್​ನನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು

    200 ಸದಸ್ಯಬಲದ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ 178 ಅಭ್ಯರ್ಥಿಗಳನ್ನು ಘೋಷಿಸಿದ್ದು, 21 ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. 1 ಸೀಟನ್ನು ಮಿತ್ರಪಕ್ಷ ಆರ್​ಎಲ್​ಡಿಗೆ ಕಾಂಗ್ರೆಸ್​ ಬಿಟ್ಟುಕೊಟ್ಟಿದೆ. 105 ಹಾಲಿ ಶಾಸಕರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದ್ದು, 12 ಮಂದಿ ಹಾಲಿ ಶಾಸಕರಿಗೆ ಟಿಕೆಟ್​ ನಿರಾಕರಿಸಿದೆ. 24 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts