More

    ಮ್ಯಾಗ್ನೆಟ್​ ಬಳಸಿ ಬಾಲಕನ ಹೊಟ್ಟೆಯಿಂದ ಸೂಜಿ ಹೊರತೆಗೆದ ವೈದ್ಯರು; ಏಮ್ಸ್​ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ

    ನವದೆಹಲಿ: ಹೊಲಿಗೆ ಸೂಜಿಯನ್ನು ನುಂಗಿದ್ದ ಬಾಲಕನ ಹೊಟ್ಟೆಯಿಂದ ವೈದ್ಯರು ಮ್ಯಾಗ್ನೆಟ್​ ಬಳಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS)ನಲ್ಲಿ ನಡೆದಿದೆ.

    7 ವರ್ಷದ ಮಗುವಿನ ಎಡ ಶ್ವಾಸಕೋಶದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಹೊರತೆಗೆದಿದ್ದಾರೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ಪ್ರಕಾರ, ಮಗುವಿನ ಶ್ವಾಸಕೋಶದಲ್ಲಿ 4 ಸೆಂ.ಮೀ ಉದ್ದದ ಸೂಜಿ ಅಂಟಿಕೊಂಡಿತ್ತು, ಇದನ್ನು ಸಂಕೀರ್ಣ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಹಿರಿಯ ವೈದ್ಯರಾದ ವಿಶೇಷ್​ ಜೈನ್​ ಅವರು, ಬಾಲಕ ಪದೇ ಪದೇ ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದ, ನಿರಂತರವಾಗಿ ಕೆಮ್ಮು ಬರುತ್ತಿತ್ತು. ವೈದ್ಯರು ಮಗುವಿನ ವಿಕರಣ ಪರೀಕ್ಷೆಯನ್ನು ನಡೆಸಿದಾಗ ಮಗುವಿನ ಎಡ ಶ್ವಾಸಕೋಶದಲ್ಲಿ ಹೊಲಿಗೆ ಯಂತ್ರದ ಸೂಜಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಆದರೆ ಅದನ್ನು ತೆಗೆಯುವುದು ಸುಲಭವಾಗಿರಲಿಲ್ಲ, ತುಂಬಾ ಆಳದಲ್ಲಿ ಸೂಜಿ ಸಿಲುಕಿಕೊಂಡಿತ್ತು.

    AIIMS Surgery

    ಇದನ್ನೂ ಓದಿ: 35ನೇ ವಸಂತಕ್ಕೆ ಕಾಲಿಟ್ಟ ವಿರಾಟ್​ ಕೊಹ್ಲಿ; ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ ಕ್ರಿಕೆಟ್​ ಕಾಶಿ

    ವೈದ್ಯರು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದ ನಂತರ ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಚಾಂದಿನಿ ಚೌಕ್‌ನಿಂದ 4 ಎಂಎಂ ಅಗಲ ಮತ್ತು 1.5 ಎಂಎಂ ದಪ್ಪದ ಮ್ಯಾಗ್ನೆಟ್​ ಒಂದನ್ನು ತರಿಸಿಕೊಂಡರು. ಮಗುವಿನ ಶ್ವಾಸನಾಳ ಅಥವಾ ಉಸಿರಾಟದ ಪೈಪ್‌ಗೆ ಹಾನಿಯಾಗದಂತೆ ಸೂಜಿಯ ಸ್ಥಳಕ್ಕೆ ಮ್ಯಾಗ್ನೆಟ್​ಅನ್ನು ಹೇಗೆ ತಲುಪಿಸುವುದು ಎಂಬುದು ದೊಡ್ಡ ಸವಾಲಾಗಿತ್ತು.

    ಶಸ್ತ್ರಚಿಕಿತ್ಸೆಗೆ ಮುನ್ನ ಮ್ಯಾಗ್ನೆಟ್​ಅನ್ನು ಕ್ರಿಮಿನಾಶಕಗೊಳಿಸಲಾಯಿತು, ಇದರಿಂದ ಮಗುವಿಗೆ ಯಾವುದೇ ಸೋಂಕು ಬರುವುದಿಲ್ಲ. ನಂತರ ತಂಡವು ಶ್ವಾಸಕೋಶದಲ್ಲಿ ಸೂಜಿಯನ್ನು ಪತ್ತೆಹಚ್ಚಲು ಶ್ವಾಸನಾಳದ ಎಂಡೋಸ್ಕೋಪಿಯನ್ನು ನಡೆಸಿತು. ಇದರ ನಂತರ ಮ್ಯಾಗ್ನೆಟ್​ಅನ್ನು ಬಾಯಿಯ ಮೂಲಕ ಶ್ವಾಸಕೋಶಕ್ಕೆ ತಲುಪಿಸಲಾಯಿತು. ಸೂಜಿಯು ಮ್ಯಾಗ್ನೆಟ್​ಗೆ ಅಂಟಿಕೊಂಡಿತು ಮತ್ತು ಶ್ವಾಸಕೋಶದಿಂದ ಯಶಸ್ವಿಯಾಗಿ ಹೊರತೆಗೆಯಲಾಯಿತು.

    ಈಗ ಮಗು ಆರೋಗ್ಯವಾಗಿದೆ. ಬಾಲಕ ಸೂಜಿ ನುಂಗಿದ್ದು ಅವನ ತಾಯಿಗೂ ಗೊತ್ತಿರಲಿಲ್ಲ. ಗುರುವಾರ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಶುಕ್ರವಾರ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಾಲಕ ಸಂಪೂರ್ಣವಾಗಿ ಇಚೇತರಿಸಿಕೊಂಡಿದ್ದು, ಶನಿವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರಾದ ವಿಶೇಷ್​ ಜೈನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts