More

    ಪ್ರತಿಮಾ ಕೊಲೆ ಪ್ರಕರಣ; ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ

    ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಒಂದು ಹೊರಬಂದಿದೆ.

    ಪ್ರತಿಮಾ ಅವರ ಹತ್ಯೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಅವರು ಮನೆಯ ಡೋರ್ ತೆಗೆಯುತ್ತಿದ್ದಂತೆ ದುಷ್ಕರ್ಮಿಗಳು ಹಿಂದಿನಿಂದ ದಾಳಿ ಮಾಡಿ ಹತ್ಯೆ ಮಾಡಿ ಪರಾರಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಪೂರ್ವನಿಯೋಜಿತ ಕೃತ್ಯ

    ಶನಿವಾರ ಸಂಜೆ ಎಂದಿನಂತೆ ಕೆಲಸ ಮುಗಿದ ಬಳಿಕ ರಾತ್ರಿ 7:45ರ ಸುಮಾರಿಗೆ ಕಚೇರಿಯಿಂದ ಹೊರಟಿದ್ದು, ರಾತ್ರಿ 8:30ರ ಸುಮಾರಿಗೆ ಮನೆಗೆ ಬಂದಿದ್ದಾರೆ. ಬಳಿಕ ಡ್ರೈವರ್​ ಕಾರ್​ ಪಾರ್ಕ್​ ಮಾಡಿ ತನ್ನ ಪಾಡಿಗೆ ತಾನಿ ತೆರಳಿದ್ದಾನೆ. ಕಾರಿನಿಂದ ಇಳಿದು ಪ್ರತಿಮಾ ಮೊದಲ ಮಹಡಿಯಲ್ಲಿರುವ ಮನೆಗೆ ಬಂದಿದ್ದರು. ಮನೆಯ ಡೋರ್ ತೆಗೆಯುತ್ತಿದ್ದಂತೆ ಹಿಂದಿನಿಂದ ದಾಳಿ ಮಾಡಲಾಗಿದೆ.

    Prathima Geologist

    ಇದನ್ನೂ ಓದಿ: ಬಿಜೆಪಿ ಎಂದರೆ ಭರವಸೆ, ನಂಬಿಕೆ; ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಪ್ರಧಾನಿ ಮೋದಿ

    ಈ ವೇಳೆ ಪ್ರತಿಮಾರ ಬಾಯಿಯನ್ನು ಮುಚ್ಚಿರುವ ಆರೋಪಿಗಳು ಕುತ್ತಿಗೆಯಿಂದ ಹಗ್ಗವನ್ನು ಕಟ್ಟಿ ಮನೆ ಒಳಗೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಚಾಕುವಿನಿಂದ ಕತ್ತು ಸೀಳಿ ಅವರ ಹತ್ಯೆ ಮಾಡಿದ್ದಾರೆ. ದಾಳಿ ವೇಳೆ ಪ್ರತಿಮಾ ಧರಿಸುತ್ತಿದ್ದ ಕನ್ನಡಕ ಹಾಗೂ ಊಟದ ಡಬ್ಬಿ ಬಾಗಿಲ ಬಳಿಯೇ ಬಿದ್ದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

    ಶನಿವಾರ ರಾತ್ರಿ ಪ್ರತಿಮಾ ಅವರ ಸಹೋದರ ಅವರಿಗೆ ಅನೇಕ ಬಾರಿ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸಿರಲಿಲ್ಲ. ಬೆಳಗ್ಗೆ 8 ಘಂಟೆ ಸುಮಾರಿಗೆ ಪ್ರೆತಿಮಾ ಅವರ ಮನೆ ಬಂದು ಪರಿಶೀಲಿಸಿದಾಗ ಪ್ರತಿಮಾ ಅವರು ಕೊಲೆಆಯಗಿರುವ ವಿಚಾರ ಬಯಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts