More

    ಕ್ರಿಕೆಟ್ ದೇವರ ದಾಖಲೆ ಮುರಿದ ವಿರಾಟ್​; 20 ವರ್ಷಗಳ ಹಿಂದಿನ ರೆಕಾರ್ಡ್​ ಬ್ರೇಕ್ ಮಾಡಿದ ಕೊಹ್ಲಿ

    ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್​ನಲ್ಲಿ ವಿರಾಟರೂಪ ತೋರುತ್ತಿದ್ದು, ಕ್ರಿಕೆಟ್ ದೇವರ 20 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

    ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸುವ ಮೂಲಕ ಅವರು ಈ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 2003ರ ಏಕದಿನ ವಿಶ್ವಕಪ್​ನಲ್ಲಿ 673 ರನ್ ಗಳಿಸಿದ್ದರು. ಆದರೆ ಇದೀಗ ವಿರಾಟ್​ ಕೊಹ್ಲಿ 674 ರನ್​ಗಳನ್ನು ಗಳಿಸಿ ಇನ್ನೂ ಅಜೇಯರಾಗಿ ಆಟ ಮುಂದುವರಿಸಿರುವ ಮೂಲಕ ಸಚಿನ್ ದಾಖಲೆ ಮುರಿದಿದ್ದಾರೆ.

    ಇದನ್ನೂ ಓದಿ: ಈ ದಾಖಲೆ ಮಾಡಿದ ಮೊದಲ ಕ್ರಿಕೆಟಿಗ ವಿರಾಟ್; ಇನ್ನೊಂದು ದಾಖಲೆಯ ಮುರಿಯವ ಹಾದಿಯಲ್ಲಿ ಕೊಹ್ಲಿ

    ಮಾತ್ರವಲ್ಲ, ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತು ಇನ್ನಿಂಗ್ಸ್​ನಲ್ಲಿ ಒಟ್ಟು 8 ಸಲ ಅರ್ಧ ಶತಕ ಬಾರಿಸುವ ಮೂಲಕ ಈ ದಾಖಲೆ ಮಾಡಿರುವ ಪ್ರಥಮ ಆಟಗಾರ ಎಂಬ ಖ್ಯಾತಿಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಸದ್ಯ 92 ರನ್ ಮಾಡಿರುವ ವಿರಾಟ್ ಕೊಹ್ಲಿ, ಸಚಿನ್ ಅವರ ಇನ್ನೊಂದು ದಾಖಲೆಯನ್ನೂ ಮುರಿಯುವುದು ನಿಚ್ಚಳವಾಗಿದೆ.

    ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್

    ಯಾರು ಹಿತವರು ಈ ಮೂವರೊಳಗೆ?: ಮೂರೂ ಪಕ್ಷಗಳ ಬಗ್ಗೆ ಖ್ಯಾತ ನಿರ್ದೇಶಕರು ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts