ಈ ದಾಖಲೆ ಮಾಡಿದ ಮೊದಲ ಕ್ರಿಕೆಟಿಗ ವಿರಾಟ್; ಇನ್ನೊಂದು ದಾಖಲೆಯ ಮುರಿಯವ ಹಾದಿಯಲ್ಲಿ ಕೊಹ್ಲಿ

Virat Kohli
Published on

ಮುಂಬೈ: ಏಕದಿನ ವಿಶ್ವಕಪ್ ಕ್ರಿಕೆಟ್​ನ ಸೆಮಿಫೈನಲ್​ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿ ಸೆಣಸಾಡುತ್ತಿದ್ದು, ಭಾರತ ತಂಡದ ವಿರಾಟ್ ಕೊಹ್ಲಿ ಈಗಾಗಲೇ ಆಟದಲ್ಲಿ ತಮ್ಮ ವಿರಾಟ ಸ್ವರೂಪ ದರ್ಶನ ಮಾಡಿಸುತ್ತಿದ್ದು, ಮಹತ್ವದ ದಾಖಲೆಯೊಂದನ್ನು ಮಾಡಿರುವ ಪ್ರಥಮ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಏಕದಿನ ವಿಶ್ವಕಪ್​ 2023ರ ಸೆಮಿಫೈನಲ್​ ಪಂದ್ಯದ ಟಾಸ್​ ಗೆದ್ದ ಭಾರತ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿಯ ಆಟ ಕೌತುಕ ಕೆರಳಿಸಿದೆ. ಅಂದರೆ ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತು ಇನ್ನಿಂಗ್ಸ್​ನಲ್ಲಿ ಒಟ್ಟು 8 ಸಲ ಅರ್ಧ ಶತಕ ಬಾರಿಸಿದ ಪ್ರಥಮ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅದಲ್ಲದೆ ವಿರಾಟ್ ಆಟದ ಗತಿ ನೋಡಿದರೆ ಅವರು ಇಂದು ಇನ್ನೆರಡು ದಾಖಲೆಗಳನ್ನು ಮಾಡುವ ಲಕ್ಷಣಗಳು ಗೋಚರಿಸಿದ್ದು, ಅವರ ಆಟವನ್ನು ಕ್ರಿಕೆಟ್ ಅಭಿಮಾನಿಗಳು ಕೌತುಕದಿಂದ ನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net