More

    ಕಾರಿನ ಚಕ್ರಗಳ ಗಾಳಿ ತೆಗೀತಿದ್ರಂತೆ ಸಚಿನ್; ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲ್ಯದ ತುಂಟತನ ನೆನಪಿಸಿಕೊಂಡ ತೆಂಡುಲ್ಕರ್

    ನವದೆಹಲಿ: ಸಾಮಾನ್ಯವಾಗಿ ಎಲ್ಲ ಮಕ್ಕಳು ಬಾಲ್ಯದಲ್ಲಿ ತುಂಬ ತುಂಟರಾಗಿಯೇ ಇರುತ್ತಾರೆ. ನಾನಾ ಥರದ ತರ್ಲೆತನ ತೋರಿರುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಅದಕ್ಕೆ ಹೊರತಾಗಿಲ್ಲ. ಅವರೂ ಬಾಲ್ಯದಲ್ಲಿ ಭಾರಿ ತರ್ಲೆ ಆಗಿದ್ರಂತೆ. ಮಕ್ಕಳ ದಿನವಾದ ಇಂದು ಅವರು ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ.

    ಸ್ವಲ್ಪ ಕಿಡಿಗೇಡಿತನ ಇರದಿದ್ದರೆ ಬಾಲ್ಯವು ಅಪೂರ್ಣ. ನಾನು ಚಿಕ್ಕವನಾಗಿದ್ದಾಗ ನನ್ನ ಫ್ರೆಂಡ್ಸ್ ಜತೆ ಸಾಹಿತ್ಯ ಸಹವಾಸ್​ನ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಅಲ್ಲಿದ್ದ ಕಾರುಗಳ ಚಕ್ರಗಳ ಗಾಳಿ ತೆಗೆಯುತ್ತಿದ್ದೆವು. ನಾವು ಅದರಲ್ಲಿ ಎಷ್ಟು ಎಕ್ಸ್​ಪರ್ಟ್ ಆಗಿದ್ದೆವೆಂದರೆ ನಾಲ್ಕೂ ಚಕ್ರಗಳನ್ನು ಚಪ್ಪಟೆ ಮಾಡದೆ ನಮ್ಮ ಕೀಟಲೆ ಪೂರ್ಣವಾಗಿರುತ್ತಿರಲಿಲ್ಲ ಎಂದು ತಮ್ಮ ಬಾಲ್ಯದ ತುಂಟತನವನ್ನು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ ಪಂದ್ಯಗಳಲ್ಲಿ ಸೋಲು; ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಏನಾಗಲಿದೆ ಬದಲಾವಣೆ?

    ನೀವೂ ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಆಗ ಮಾಡುತ್ತಿದ್ದ ತರ್ಲೆತನಗಳ ಬಗ್ಗೆ ನನ್ನ ಪೋಸ್ಟ್​ಗೆ ರಿಪ್ಲೈ ಮಾಡುವ ಮೂಲಕ ಹೇಳಿಕೊಳ್ಳಿ ಎಂದಿರುವ ಸಚಿನ್, ಅಷ್ಟರೊಳಗೆ ನಾನು ಹೊರಗೆ ಹೋಗಿ ನನ್ನ ಕಾರಿನ ಟಯರ್​ಗಳನ್ನು ಚೆಕ್ ಮಾಡಿ ಬರುತ್ತೇನೆ ಎಂಬುದಾಗಿ ಹೇಳಿ ನಗೆಯುಕ್ಕಿಸಿದ್ದಾರೆ.

    ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಸುಳಿಗೆ ಈ ಪ್ರಖ್ಯಾತ ಕಂಪನಿಯೂ ಸಿಲುಕಿತಾ?: ದಾಖಲಾಯಿತು ಎಫ್​ಐಆರ್​!

    ಹೀಗೆ ಸಚಿನ್ ತನ್ನ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಳ್ಳುತ್ತ ಮಕ್ಕಳ ದಿನಾಚರಣೆಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಅವರ ಈ ಪೋಸ್ಟ್​​ಗೆ ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ. ಈ ಪೋಸ್ಟ್ 15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಇನ್ನು ಸಚಿನ್​ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಎಂಆರ್​​ಎಫ್​ನವರು ಯಾಕೆ ನಿಮ್ಮನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ತೆಗೆದುಕೊಂಡರು ಎಂಬುದು ಈಗ ಗೊತ್ತಾಯ್ತು ಎಂದಿದ್ದಾರೆ.

    ನಾಳೆ 8 ಕೋಟಿಗೂ ಅಧಿಕ ಜನರ ಖಾತೆಗೆ ಬಿಡುಗಡೆ ಆಗಲಿದೆ ಒಟ್ಟು 18 ಸಾವಿರ ಕೋಟಿ ರೂಪಾಯಿ!

    ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts