More

    ವಿಶ್ವಕಪ್​ ಪಂದ್ಯಗಳಲ್ಲಿ ಸೋಲು; ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಏನಾಗಲಿದೆ ಬದಲಾವಣೆ?

    ನವದೆಹಲಿ: ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಸೋಲು ಕಂಡು ಹೊರಬಿದ್ದಿರುವ ಪಾಕಿಸ್ತಾನ ತಂಡದಲ್ಲಿ ಭಾರಿ ಬದಲಾವಣೆಗಳು ಆಗಲಿವೆ ಸಾಧ್ಯತೆಗಳಿವೆ ಎನ್ನಲಾಗಿದೆ. ಅದರಲ್ಲೂ ತಂಡದ ವಿದೇಶಿ ಕೋಚ್​​ಗಳಿಗೆ ಕುತ್ತುಂಟಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

    ಪಾಕಿಸ್ತಾನ ಕ್ರಿಕೆಟ್ ತಂಡದ ಹೆಡ್​ ಕೋಚ್ ಗ್ರ್ಯಾಂಟ್ ಬ್ರ್ಯಾಡ್​ಬರ್ನ್, ಟೀಮ್ ಡೈರೆಕ್ಟರ್​ ಮಿಕ್ಕಿ ಆರ್ಥರ್ ಮತ್ತು ಬ್ಯಾಟಿಂಗ್ ಕೋಚ್​ ಆ್ಯಂಡ್ರ್ಯೂ ಪುಟಿಕ್ ಅವರನ್ನು ಆ ಸ್ಥಾನಗಳಿಂದ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಇದನ್ನೂ ಓದಿ: ನಾಳೆ 8 ಕೋಟಿಗೂ ಅಧಿಕ ಜನರ ಖಾತೆಗೆ ಬಿಡುಗಡೆ ಆಗಲಿದೆ ಒಟ್ಟು 18 ಸಾವಿರ ಕೋಟಿ ರೂಪಾಯಿ!

    ಇಷ್ಟು ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವ ಕೂಡ ಡೋಲಾಯಮಾನ ಸ್ಥಿತಿಯಲ್ಲಿದೆ ಎಂದೂ ಹೇಳಲಾಗುತ್ತಿದೆ. ಇವೆಲ್ಲವೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ತಂಡ ತೋರಿದ ಕಳಪೆ ಪ್ರದರ್ಶನದ ಪರಿಣಾಮ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ನನ್ನ ಆಯ್ಕೆ ಅವರ ತೀರ್ಮಾನ, ಇದಕ್ಕೆ ಯಾರದ್ದೂ ವಿರೋಧವಿಲ್ಲ: ಬಿ.ವೈ.ವಿಜಯೇಂದ್ರ

    ವಿಶ್ವಕಪ್ ಪಂದ್ಯಾವಳಿಯ 9 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಸೋತ ಪಾಕಿಸ್ತಾನ ಸೆಮಿಫೈನಲ್ ಪ್ರವೇಶದಿಂದ ವಂಚಿತಗೊಂಡಿದೆ. ಪಾಕ್​ ತಂಡದ ಕಳಪೆ ಪ್ರದರ್ಶನದ ಕುರಿತ ಪರಾಮರ್ಶೆಯ ಸಭೆಯನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಡೆಸಲಿದೆ ಎನ್ನಲಾಗಿದೆ.

    ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

    ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts