

ಬೆಂಗಳೂರು: ಸ್ಟಾರ್ ಕ್ರಿಕೆಟ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಟಿಆರ್ ಹೋಟೆಲ್ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ-ಅನುಷ್ಕಾ ಜೋಡಿ ಸ್ನೇಹಿತರೊಂದಿಗೆ ಬೆಂಗಳೂರು ಸುತ್ತಾಡಿದ್ದಾರೆ.
ಸ್ನೇಹಿತರೊಂದಿಗೆ ಬೆಂಗಳೂರು ನಗರ ಸುತ್ತಾಡಿರುವ ಬಗ್ಗೆ ಅನುಷ್ಕಾ ಶರ್ಮ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಸೆಂಟ್ರೆಲ್ ಟಿಫಿನ್ ರೂಂ ಮತ್ತು ಕಾರ್ನರ್ ಹೌಸ್ಗೆ ಭೇಟಿ ನೀಡಿ, ಮಸಾಲೆದೋಸೆ, ಐಸ್ ಕ್ರೀಂ, ಮಂಗಳೂರು ಬೊಂಡಾ ಮತ್ತು ಕೇಸರಿಬಾತ್ ರುಚಿ ಸವಿದಿದ್ದಾರೆ.
ಸಿಟಿಆರ್ ಹೋಟೆಲ್ಗೆ ಕೊಹ್ಲಿ-ಅನುಷ್ಕಾ ಜೋಡಿ ಬಂದಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ ಜೋಡಿ ಬಂದಿರುವುದು ಗೊತ್ತಾಗುತ್ತಿದ್ದಂತೆ ಹೋಟೆಲ್ ಮುಂಭಾಗ ಸಾಕಷ್ಟು ಅಭಿಮಾನಿಗಳು ಸೇರಿದ್ದಾರೆ. ಕೊಹ್ಲಿ-ಅನುಷ್ಕಾ ಹೋಟೆಲ್ನಿಂದ ಹೊರಬರುತ್ತಿದ್ದಂತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.