

ಚೆನೈ: ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ IPLನಿಂದ ನಿವೃತ್ತಿಯಾಗುವ ಸುಳಿವನ್ನು ನೀಡಿದ್ಧಾರೆ.
ಶುಕ್ರವಾರ CSK ಹಾಗೂ SRH ನಡುವೆ ನಡೆದ ಪಂದ್ಯದ ಬಳಿಕ ಅವರ ಈ ಹೇಳಿಕೆ ನೀಡಿದ್ದು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ ಈಗಾಗಲೇ ಎಲ್ಲವನ್ನು ಹೇಳಿದ್ದೇನೆ ಹಾಗೂ ಮಾಡಿದ್ದೇನೆ ಇದು ನನ್ನ ವೃತ್ತಿ ಜೀವನದ ಕೊನೆಯ ಹಂತವಾಗಿದೆ ನಾನು ಇನ್ನು ಎಷ್ಟು ಸಮಯ ಆಡುತ್ತೇನೆ ಎಂದು ಗೊತ್ತಿಲ್ಲ.
ಮುರು ವರ್ಷಗಳ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಅವಕಾಶ ದೊರೆತಿದೆ. ಪ್ರೇಕ್ಷಕರು ನಮಗೆ ಸಾಕಷ್ಟು ಪ್ರೀತಿಯನ್ನು ತೋರಿದ್ಧಾರೆ ನಾನು ಇದಕ್ಕೆ ಋಉಣಿಯಾಗಿರುತ್ತೇನೆ ಎಂದು ಪಂದ್ಯದ ಬಳಿಕ ಹೇಳಿದ್ದಾರೆ.
2019 ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದ ಧೋನಿ IPLನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.
ಕಳೆದ ವರ್ಷ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧೋನಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ನೂತನ ಕ್ಯಾಪ್ಟನ್ ಆಗಿ ತಂಡದ ಆಡಳಿತ ಮಂಡಳಿ ಘೋಷಿಸಿತ್ತು. ಆದರೆ, ಸತತ ಸೋಲುಗಳ ಬಳಿಕ ಧೋನಿ ಅವರನ್ನು ಪುನಃ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.
ಇದೀಗ ಧೋನಿ ಇದು ನನ್ನ ವೃತ್ತಿ ಜೀವನದ ಕೊನೆ ಹಂತ ಎಂದು ಹೇಳುವ ಮೂಲಕ IPLಗೂ ಕೂಡ ನಿವೃತ್ತಿ ಗೋಷಿಸುವ ಸುಳಿವು ನೀಡಿದ್ದಾರೆ.