More

    ಕಳುವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ಕಿಟ್ ಪತ್ತೆ; ಬೆಂಗಳೂರಿನಲ್ಲಿ ಇಬ್ಬರ ಬಂಧನ

    ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಬಳಸುವ ಕ್ರಿಕೆಟ್ ಕಿಟ್‌ಗಳನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು 16 ಲಕ್ಷ ರೂ. ಬೆಲೆ ಬಾಳುವ ಕ್ರಿಕೆಟ್ ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚಳ್ಳಘಟ್ಟದ ರಾಜರಾಜೇಶ್ವರಿ ಬಡಾವಣೆಯ ನಿವಾಸಿ, ವಾಹನದ ಚಾಲಕ ಚೆಲುವರಾಜು(30) ಮತ್ತು ಕೊರಿಯರ್ ಬಾಯ್, ಒಡಿಶಾ ಮೂಲದ ಸುಧಾಂಶು ಕುಮಾರ್ ನಾಯಕ್(30) ಬಂಧಿತ ಆರೋಪಿಗಳು.

    ಪೊಲೀಸರಿಗೆ ಧನ್ಯವಾದ ತಿಳಿಸಿದ ವಾರ್ನರ್

    ಕ್ರಿಕೆಟ್ ಕಿಟ್ ಪತ್ತೆಯಾದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಳ್ಳತನವಾಗಿದ್ದ ಕೆಲ ವಸ್ತುಗಳು ಪತ್ತೆಯಾಗಿದ್ದು, ಇನ್ನು ಕೆಲ ವಸ್ತುಗಳು ಪತ್ತೆಯಾಗಬೇಕಷ್ಟೆ. ನಾಪತ್ತೆಯಾಗಿದ್ದ ವಸ್ತುಗಳನ್ನು ಹುಡುಕಿಕೊಟ್ಟ ಪೊಲೀಸರಿಗೆ ಧನ್ಯವಾದಗಳು ಎಂದು ವಾರ್ನರ್ ಇನ್ಸ್​​ಟಾಗ್ರಾಂ ಪೋಸ್ಟ್ ಮಾಡಿದ್ದರು.

    ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲೇ ವಿಶಿಷ್ಟ ದಾಖಲೆ ಬರೆದ ಅರ್ಜುನ್ ತೆಂಡೂಲ್ಕರ್‌! ಯಾವುದು ಆ ದಾಖಲೆ?

    ಏ.15 ರಂದು ಐಟಿಸಿ ಗಾರ್ಡೇನಿಯ ಹೋಟೆಲ್​ನಿಂದ 64 ಬ್ಯಾಗ್‌ಗಳನ್ನು ಬೆಂಗಳೂರಿನ ಏರ್‌ಪೋರ್ಟ್‌ಗೆ ಸಾಗಿಸುವ ಸಮಯದಲ್ಲಿ ಕೆಲವು ಕ್ರಿಕೆಟ್ ಕಿಟ್‌ಗಳು ಕಳ್ಳತನವಾಗಿರುವ ಬಗ್ಗೆ ಎಕ್ಸ್‌ಪ್ರೆಸ್ ಪ್ರೈಟ್ ಸಿಸ್ಟಮ್ ಇಂಡಿಯಾ ಕಂಪನಿಯ ಮ್ಯಾನೇಜಿಂಗ್ ಡೈರಕ್ಟರ್ ಆನಂದ್ ಅಗರವಾಲ ಅವರು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಕ್ರಿಕೆಟ್ ಕಿಟ್‌ಗಳನ್ನು ಬೆಂಗಳೂರಿನ ಏರ್‌ಪೋರ್ಟ್‌ಗೆ ಟಾಟಾ ಇಂಟ್ರಾ ಎಂಬ ವಾಹನದಲ್ಲಿ ಸಾಗಿಸುತ್ತಿದ್ದಾಗ ಕಳ್ಳತನ ಮಾಡಿದ್ದ ವಾಹನದ ಚಾಲಕ ಹಾಗೂ ಕೊರಿಯರ್ ಬಾಯ್ನನ್ನು ಬಂಧಿಸಿದ್ದಾರೆ.

    ಪೊಲೀಸರಿಂದ ಎಫ್​ಐಆರ್ ದಾಖಲು

    ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.15 ರಂದು ನಡೆದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳ್ಳತನವಾಗಿತ್ತು. ವಿಮಾನ ನಿಲ್ದಾಣದಲ್ಲಿ ಡೆಲ್ಲಿ ತಂಡದ 17 ಕಿಟ್‍ಗಳು ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಪ್ರತಿ ಕಿಟ್ ಕನಿಷ್ಠ 1 ಲಕ್ಷ ರೂ. ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಈ ಬಗ್ಗೆ ಡೆಲ್ಲಿ ತಂಡದ ಮ್ಯಾನೇಜ್ಮೆಂಟ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಈ‌ ಸಂಬಂಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

    ಹೆಚ್ಚಿನ ವಿಚಾರಣೆ

    ಆರೋಪಿಗಳಿಂದ 12 ಬ್ಯಾಟ್‌ಗಳು, 18 ಬಾಲ್​ಗಳು, 4 ಜತೆ ಹ್ಯಾಂಡ್ ಗ್ಲೋಸ್, 2 ಹೆಲ್ಮೆಟ್, 3 ಜತೆ ಲೆಗ್ ಪ್ಯಾಡ್, 2 ಥೈ ಪ್ಯಾಡ್, ಒಂದು ಸೆಂಟರ್‌ಗಾಡ್ ಹಾಗೂ ಒಂದು ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಬಂಧನವಾಗಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts