ಹೊಸ ಗೆಟಪ್​ನಲ್ಲಿ ವಿರಾಟ್-ಅನುಷ್ಕಾ! ಅಭಿಮಾನಿಗಳು ಹೇಳಿದ್ದೇನು? ಫೋಟೋಗಳು ವೈರಲ್...

Published on
ಮುಂಬೈ: ಇತ್ತೀಚೆಗೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್ ಕೊಹ್ಲಿ ಜತೆ ವಿದೇಶಗಳಲ್ಲಿ ಕ್ರಿಕೆಟ್ ಸರಣಿಗಳನ್ನು ನೋಡಲು ಹಲವು ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇದೀಗ ಕ್ರಿಕೆಟ್​ನಿಂದ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡಿರುವ ವಿರಾಟ್ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇಂದು ಈ ತಾರಾ ಜೋಡಿ ಒಂದು ಚಿತ್ರೀಕರಣದ ಸೆಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು, ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೌದು, ಮುಂಬೈನ ಮೆಹ್ಬೂಬ್ ಸ್ಟುಡಿಯೋದಲ್ಲಿ ವಿರಾಟ್, ಅನುಷ್ಕಾ ಜಾಹಿರಾತೊಂದರ ಚಿತ್ರೀಕರಣಕ್ಕೆಂದು ರೆಡಿಯಾಗಿದ್ದರು. ಈ ಶೂಟ್​ನ ಅಂಗವಾಗಿ ವಿರಾಟ್ ಕೊಹ್ಲಿ ಒಂದು ಟರ್ಬನ್ ಧರಿಸಿ ಕಾಣಿಸಿಕೊಂಡಿದ್ದು, ಅನುಷ್ಕಾ ಅವರು ಒಂದು ಸಿಂಪಲ್​ ಕುರ್ತಿನಲ್ಲಿ ಮಿಂಚುತ್ತಿದ್ದರು.
ಇದನ್ನು ಕಂಡ ಅಭಿಮಾನಿಗಳು ಜಾಹಿರಾತಿನಲ್ಲಿ ವಿರಾಟ್ ಸಿಖ್ ಪಾತ್ರವೊಂದನ್ನು ನಿರ್ವಹಿಸುತ್ತಿರಬಹುದು ಎಂದು ಭಾವಿಸ ತೊಡಗಿದ್ದಾರೆ. ಇನ್ನು, ವಿರಾಟ್ ಮತ್ತು ಅನುಷ್ಕಾ ಅವರ ಗೆಟಪ್​ಗಳಿಗೆ ಅಭಿಮಾನಿಗಳು ತುಂಬಾ ಮಜವಾಗಿ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ಅವರ ಹೊಸ ಗೆಟಪ್ ನೋಡಿದ ಅಭಿಮಾನಿಗಳು ಅನುಷ್ಕಾ ಮತ್ತು ಶಾರುಖ್ ನಟಿಸಿದ್ದ ‘ರಬ್​ನೆ ಬನಾದಿ ಜೋಡಿ’ಯನ್ನು ನೆನಪಿಸಿಕೊಂಡಿದ್ದು, ಆ ಸಿನಿಮಾದ ಎರಡನೇ ಭಾಗವಿದು ಎಂದು ಕಾಮೆಂಟ್​ಗಳ ಸುರಿ ಮಳೆ ಸುರಿಸಿದ್ದಾರೆ. ಇನ್ನೊಬ್ಬ ಅಭಿಮಾನಿ ಅಂತೂ, ವಿರಾಟ್​ಗೆ ‘ಕ್ರಿಕೆಟ್ ಬಿಟ್ಟು ಇದನ್ನೇ ಮಾಡಿ’ ಎಂದು ವಿನಂತಿಸಿದ್ದಾರೆ. ಸದ್ಯ, ಈ ತಾರಾ ಜೋಡಿಯ ಹೊಸ ಗೆಟಪ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net