'ಟೈಟಾನಿಕ್' ಪೋಸ್​ಗಾಗಿ ಈ ಮೂವರು ತಾರೆಯರು ಬದಲಾಗಿದ್ದು ಹೇಗೆ? ವಿಡಿಯೋ ವೈರಲ್...

Published on
''ಕಾತು ವಕುಲಾ ರೆಂಡು ಕಾದಲ್'' ತಮಿಳು ಚಿತ್ರದಲ್ಲಿ ನಟ ವಿಜಯ್ ಸೇತುಪತಿ, ಸಮಂತಾ, ನಯನತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದು, ಈ ಸಿನಿಮಾ ಬಹುನಿರೀಕ್ಷಿತ ತಮಿಳು ಚಲನಚಿತ್ರಗಳಲ್ಲಿ ಒಂದು ಎನ್ನಬಹುದು. ಇನ್ನು, ಕೆಲವು ದಿನಗಳ ಹಿಂದೆ, ''ಕಾತು ವಕುಲಾ ರೆಂಡು ಕಾದಲ್'' ನಿರ್ಮಾಪಕರು ಸಿನಿಮಾದ ಪ್ರಮುಖ ನಟರು ಐಕಾನಿಕ್ ಚಿತ್ರವಾದ 'ಟೈಟಾನಿಕ್'ನ ಒಂದು ಭಂಗಿಯನ್ನು ಮರುಸೃಷ್ಟಿಸುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ, ಸಿನಿಮಾದ ನಿರ್ದೇಶಕರು ಈ ಪೋಸ್​ಗೆ ನಟ ಮತ್ತು ಇಬ್ಬರು ನಟಿಯರು ಹೇಗೆ ಬದಲಾದರು ಎಂಬುದನ್ನು ಕುರಿತು ಒಂದು ಸಣ್ಣ ಬಿಟಿಎಸ್ ಗ್ಲಿಂಪ್ಸ್ ವಿಡಿಯೋ ಶೇರ್ ಮಾಡಿಕೊಂಡಿದ್ದು, ಅದು ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ, 'ಟೈಟಾನಿಕ್' ಚಿತ್ರದ ಭಂಗಿಯನ್ನು ಮರುಸೃಷ್ಟಿಸಿದ ನಂತರ ನಟಿ ಸಮಂತಾ ಮತ್ತು ನಟಿ ನಯನತಾರಾ ನಗುವುದು ಕಾಣಿಸುತ್ತಿದೆ. ಈ ವಿಡಿಯೋ ಹಂಚಿಕೊಂಡ ವಿಘ್ನೇಶ್ ಶಿವನ್, "ನಾನು ಒಂದು ಜ್ಯಾಕ್ ಮತ್ತು ಎರಡು ರೋಸ್​ಗಳೊಂದಿಗೆ ನಮ್ಮ ಟೈಟಾನಿಕ್ ಅನ್ನು ನಿರ್ಮಿಸಿದೆ...! ಎಲ್ಲಾ #KaathuVaakulaRenduKaadhal ಅಭಿಮಾನಿಗಳಿಗೆ ಈ ವಿಶೇಷ ಕ್ಲಿಪ್ ಶೇರಿಂಗ್," ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಸಮಂತಾ ಮತ್ತು ನಯನತಾರಾ ಅವರು ಖತೀಜಾ ಮತ್ತು ಕಣ್ಮಣಿ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ವಿಜಯ್ ಅವರು ರಾಂಬೋ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಸಿನಿಮಾ ಒಂದು ತ್ರಿಕೋನ ಪ್ರೇಮಕಥೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net