

ನವದೆಹಲಿ: ವಿವಾಹವು ಸಮಾರಂಭವು ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಯುತ್ತದೆ. ವರ-ವಧು, ಅವರ ಕುಟುಂಬದವರು ಮದುವೆ ಅವಿಸ್ಮರಣೀಯವಾಗಿಸಲು ಶತಪ್ರಯತ್ನ ಮಾಡುತ್ತಾರೆ. ತಮ್ಮ ಅಲಂಕಾರದ ಜತೆಗೆ ಮದುವೆ ಮಂಟಪವನ್ನೂ ಝಗಮಗಿಸುವಂತೆ ಸಿಂಗರಿಸುತ್ತಾರೆ. ಇದೆಲ್ಲಕ್ಕಿಂತಲೂ ಮುಖ್ಯವಾದುದು ಊಟ. ಅಂದ ನೋಟದ ಜತೆಗೆ ಚೆಂದದ ಊಟವೂ ಇರಬೇಕು. ಅದು ಭೂರಿಜೋಜನವಾಗಿಬೇಕು, ಎಲ್ಲರೂ ಚಪ್ಪರಿಸಿ ಉಣಬೇಕು ಎಂದು ಬಯಸುವುದು ಸಹಜ. ಆದರೆ, ಊಟದ ವಿಷಯಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮದುವೆಗೆ ಬಂದ ಅತಿಥಿಗಳೇ ಆಹಾರ ಕೌಂಟರ್‌ನಲ್ಲಿ ರೊಟ್ಟಿ (ರೋಟಿ) ತಯಾರಿಸಿ, ತಾವೇ ಬಡಿಸಿಕೊಳ್ಳುತ್ತಿರುವ ವಿಡಿಯೋ ಇದಾಗಿದೆ. ಅತಿಥಿಗಳು ತಮ್ಮ ರೊಟ್ಟಿಗಳನ್ನು ಬೇಯಿಸಿಕೊಳ್ಳುತ್ತಿರುವ ಈ ವಿಡಿಯೋ ವಿವಾಹ ಸಮಾರಂಭ ಹೀಗೂ ಇರುತ್ತದೆಯೇ ಎಂದು ಪ್ರಶ್ನಿಸುವಂತಿದೆ. ಸಾಂಪ್ರದಾಯಿಕ ಔತಣಕ್ಕೆ ಚಮತ್ಕಾರಿ ತಿರುವನ್ನು ನೀಡಿದೆ.
ಈ ಲೈವ್ ರೋಟಿ ಕೌಂಟರ್ ಸ್ಟಾರ್ ಆಕರ್ಷಣೆಯಾಗಿ ಮಾರ್ಪಟ್ಟಿದೆ, ಮದುವೆಯ ಸಮಾರಂಭವನ್ನು ಪಾಕಶಾಲೆಯ ಸಾಹಸವಾಗಿ ಪರಿವರ್ತಿಸಿದೆ.
ಮದುವೆಯ ಈ ವಿಶಿಷ್ಟ ಬಫೆಯು ಜನರು ಸಾಕಷ್ಟು ರಂಜಿಸಿದೆ, ಮದುವೆಯಲ್ಲಿ ಇದು ಕೇವಲ ಮೋಜಿನ ಆಕರ್ಷಣೆಯಾಗಿರಬಹುದು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇಂಥ ಸಂದರ್ಭದಲ್ಲಿ ನಾನು ಅನ್ನ ಮಾತ್ರ ತಿನ್ನುತ್ತೇನೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಬಹುಶಃ ಬಿಸಿ ಬಿಸಿ ರೊಟ್ಟಿ ಬಡಿಸುವ ಉದ್ದೇಶ ಇದರ ಹಿಂದೆ ಇರಬಹುದಾಗಿದೆ.
m