

ಜಗಳದ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಮಹಿಳೆಯರ ಜಗಳ ಮಾಡಿದರೆ ಸುತ್ತಲು ಇರುವವರು ನೋಡಿ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Viral Video). ಮಹಿಳೆಯರು ಬಿಂದಿಗೆ ಹಿಡಿದು ಜಗಳ ಮಾಡುತ್ತಿದ್ದು, ಈ ಕ್ಲಿಪ್ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಇಬ್ಬರು ಮಹಿಳೆಯುರು ನೀರು ಹಿಡಿಯಲು ಬಂದಿರುವುದನ್ನು ನೋಡಬಹುದು. ಆ ವೇಳೆ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದ್ದು ಬಿಂದಿಗೆ ಹಿಡಿದು ಪರಸ್ಪರ ಹಲ್ಲೆ ನಡೆಸುತ್ತಾರೆ. ಜಗಳಕ್ಕೆ ಕಾರಣವೇನು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಆದರೆ ಇಬ್ಬರು ನಡುವಿನ ಹಲ್ಲೆಯಲ್ಲಿ ನೀಲಿ ಸೀರೆಯುಟ್ಟಿರುವ ಮಹಿಳೆಯು ಎದುರಾಳಿ ಮಹಿಳೆಯನ್ನು ಸೋಲಿಸಿದಂತೆ ಕಾಣುತ್ತದೆ. ಆಕೆಗೆ ಬಿಂದಿಗೆಯಿಂದ ಶಕ್ತಿ ಬಳಸಿ ಹೊಡೆಯುತ್ತಾಳೆ. ಎದುರಿದ್ದ ಮಹಿಳೆಯ ಕೈಲಿದ್ದ ಬಿಂದಿಗೆ ಕೆಳಗೆ ಬೀಳುತ್ತದೆ. ಬಳಿಕ ಆಕೆ ಬರಿಕೈನಿಂದಲೇ ಹೊಡೆಯಲು ಮುಂದಾಗುವುದನ್ನು ಕಾಣಬಹುದು. ಆದರೆ ಈ ಘಟನೆ ನಡೆದಿರುವ ಸ್ಥಳ ಯಾವುದು ಎಂದು ತಿಳಿದುಬಂದಿಲ್ಲ.
ಸುಮಾರು 9 ಸೆಕೆಂಡುಗಳಿರುವ ಈ ಕ್ಲಿಪ್ ಅನ್ನು 22 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವಾರ್ ನಿಜಕ್ಕೂ ಉತ್ತಮವಾಗಿದೆ, ಇವರು ಒಳ್ಳೆಯ ಶಸ್ತ್ರಾಸ್ತ್ರದೊಂದಿಗೆ ಹೋರಾಡುತ್ತಿದ್ದಾರೆ, ಬಿಂದಿಗೆಗಳೊಂದಿಗೆ ಟಿಂಕ್ಲಿಂಗ್, ಈ ಜಗಳ ನೋಡಿ ಖುಷಿಯಾಗಿದೆ, ಬಾಹುಲಿ ಸಿನಿಮಾದ ಆ್ಯಕ್ಷನ್ನಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ.