ನೋಯ್ಡಾ: ನಾಯಿ ವಿಚಾರಕ್ಕೆ ಆರಂಭವಾದ ಜಗಳದಲ್ಲಿ ಹುಡುಗಿಯರಿಬ್ಬರು ವೃದ್ಧ ದಂಪತಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನಾಯಿಯನ್ನು ಸೊಸೈಟಿಯೊಳಗೆ ಕರೆತಂದಿರುವುದಕ್ಕೆ ವೃದ್ಧ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಹುಡುಗಿಯರು ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Video Viral).

ವೈರಲ್ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ವೃದ್ಧ ದಂಪತಿಯೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಒಬ್ಬ ಹುಡುಗಿ ಹಿರಿಯರ ಮೇಲೆ ಕೈಎತ್ತಿದ್ದಾಳೆ. ನಂತರ ಇಬ್ಬರೂ ಸೇರಿ ವೃದ್ಧ ದಂಪತಿಗೆ ಥಳಿಸಲು ಆರಂಭಿಸಿದ್ದಾರೆ. ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುವ ಜನರು ಮಧ್ಯಪ್ರವೇಶಿಸಲು ಮುಂದೆ ಬಂದಿದ್ದಾರೆ. ಅವರಿಗೆ ಹಿರಿಯರೊಂದಿಗೆ ಜಗಳವಾಡಬೇಡಿ ಎಂದೂ ಹೇಳುತ್ತಿದ್ದಾರೆ. ಅದನ್ನು ಒಪ್ಪದ ಹುಡುಗಿಯರು ಹಿರಿಯರ ಮೇಲೆ ದೌರ್ಜನ್ಯ ನಡೆಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನೋಯ್ಡಾದ ಸೆಕ್ಟರ್ 78ರಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಸೊಸೈಟಿಯೊಂದರ ನಿವಾಸಿಯೊಬ್ಬರು ನಾಯಿಯನ್ನು ಬಾರು ಇಲ್ಲದೆ ಸುತ್ತಾಡಲು ಕರೆತಂದಿದ್ದಾರೆ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಬಳಿಕ ಬಾಲಕಿಯರು ವೃದ್ಧ ದಂಪತಿಗೆ ಥಳಿಸಿದ್ದಾರೆ.
Lafda from Noida again!
Hyde Park Society, Sector-78Two girls fighting with an elderly couple when they objected to them for taking out their pet dog without any leash. The girls even slapped the elderly couple. pic.twitter.com/Cvxf2G9JS4
— Keh Ke Peheno (@coolfunnytshirt) October 25, 2024
ಅಂಗವೈಕಲ್ಯರು ಮತ್ತು ಮಕ್ಕಳ ಮೇಲೆ ಬೀದಿನಾಯಿಗಳು ಮತ್ತು ಮಂಗಗಳಿಂದ ಹೆಚ್ಚುತ್ತಿರುವ ದಾಳಿ ಮತ್ತು ಕಾಟದ ವಿಷಯದ ಕುರಿತು ದೆಹಲಿ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ನಡೆಸಲಿರುವ ಸಮಯದಲ್ಲೇ ಈ ವಿಡಿಯೋ ವೈರಲ್ ಆಗಿದೆ. ಕಳೆದ ತಿಂಗಳು 2008ರಲ್ಲಿ ಐದು ತಿಂಗಳ ಮಗುವನ್ನು ಬೀದಿ ನಾಯಿ ಕಚ್ಚಿ ಸಾಯಿಸಿದ ತಾಯಿಗೆ ದೆಹಲಿ ಹೈಕೋರ್ಟ್ 2.5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿದೆ.
ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ನಾಯಿಯೊಂದು ಬಾಲಕಿಯ ಮೇಲೆ ದಾಳಿ ನಡೆಸಿದ್ದ ಮತ್ತೊಂದು ಘಟನೆ ಮೇ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು.(ಏಜೆನ್ಸೀಸ್)
ಉಬರ್ನಲ್ಲಿ ಇನ್ಮುಂದೆ ಒಂಟೆ ರೈಡ್ ಲಭ್ಯ; ಬುಕ್ ಮಾಡಿದ ಮಹಿಳೆಯ ವಿಡಿಯೋ ಕಂಡು ನೆಟ್ಟಿಗರು ಶಾಕ್ | VIral Video