

ಇಸ್ಲಾಮಾಬಾದ್: ಕೆಲವೊಮ್ಮೆ ಕೇಳುವ ಪ್ರಶ್ನೆ ಅರ್ಥವಾಗದೆ ಸೆಲಿಬ್ರಿಟಿಗಳು ಮುಜುಗರಕ್ಕೆ ಒಳಗಾಗುವುದನ್ನು ನಾವು ನೋಡಿರುತ್ತೇವೆ. ಅಂತಹದ್ದೆ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ವರದಿಗಾರರು ಕೇಳಿದ ಪ್ರಶ್ನೆ ಅರ್ಥವಾಗದೆ ಕಕ್ಕಾಬಿಕ್ಕಿಯಾಗಿದ್ದಾರೆ. ಮುಂದೆ ಅವರಿಗೆ ಅರ್ಥವಾಗುವಂತೆ ಪ್ರಶ್ನೆಯನ್ನು ಹೇಗೆ ಕೇಳುತ್ತಾರೆ ಎಂಬುದನ್ನು ಅದಕ್ಕೆ ಅವರು ಹೇಗೆ ಉತ್ತರಿಸುತ್ತಾರೆ ಎಂಬುದು ವೈರಲ್(Viral Video) ಆಗುತ್ತಿದೆ.
ಸರಣಿಯ ಮೊದಲ ಎರಡು ಪಂದ್ಯಗಳು ಮುಲ್ತಾನ್‌ನಲ್ಲಿ ನಡೆದವು. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ದಾಖಲೆ ಮುರಿಯುವ ಪ್ರದರ್ಶನ ನೀಡಿ ಇನ್ನಿಂಗ್ಸ್ ಮತ್ತು 47 ರನ್‌ಗಳಿಂದ ಗೆದ್ದಿತ್ತು. ಮುಲ್ತಾನ್‌ನ ಪಿಚ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಈ ಸಾಧನೆ ಮಾಡಿತ್ತು. ರಾವಲ್ಪಿಂಡಿಯಲ್ಲಿ ಇಂಗ್ಲೆಂಡ್ ಅದನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆಯೇ ಎಂಬುದು ಪ್ರಶ್ನೆಯಾಗಿತ್ತು.
ವೈರಲ್ ವಿಡಿಯೋದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪಾಕಿಸ್ತಾನಿ ವರದಿಗಾರರೊಬ್ಬರು ಇಂಗ್ಲಿಷ್ನಲ್ಲಿ ಕೇಳಿದ ಪ್ರಶ್ನೆ ಅರ್ಥವಾಗುತ್ತಿಲ್ಲ ಎಂದು ರಿಯಾಕ್ಷನ್ ಅನ್ನು ನೋಡಬಹುದು. ಪಿಂಡಿಯ (ರಾವಲ್ಪಿಂಡಿ) ಸ್ವರ್ಗದಂತಹ ಪಿಚ್‌ನಲ್ಲಿ ಇಂಗ್ಲೆಂಡ್ ತಂಡವು ಮತ್ತೊಮ್ಮೆ 800+ ರನ್ ಗಳಿಸಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನೆ ಕೇಳಲಾಗುತ್ತದೆ. ಎರಡು ಬಾರಿ ಕೇಳಿದಾಗಲೂ ಆ ಪ್ರಶ್ನೆ ಬೆನ್ ಸ್ಟೋಕ್ಸ್ಗೆ ಅರ್ಥವಾಗುವುದಿಲ್ಲ. ಮೂರನೇ ಬಾರಿಗೆ ಪ್ರಶ್ನೆಯನ್ನು ಇನ್ನಷ್ಟು ಮಾರ್ಪಡಿಸಿ ಕೇಳಿದಾಗ ಅಂತಿಮವಾಗಿ ಸ್ಟೋಕ್ಸ್ನಿಂದ ಉತ್ತರವನ್ನು ಪಡೆಯುವುದನ್ನುಕಾಣಬಹುದು.
ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆದ್ದ ನಂತರ ಪಾಕಿಸ್ತಾನದ ಆಯ್ಕೆಗಾರರು ತಮ್ಮ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು. ಹಿರಿಯ ಆಟಗಾರರಾದ ಬಾಬರ್ ಆಜಮ್ ಮತ್ತು ಶಾಹೀನ್ ಶಾ ಆಫ್ರಿದಿ ಅವರಿಗೆ ವಿಶ್ರಾಂತಿ ನೀಡಿ ಕೆಲವು ಹೊಸ ಆಟಗಾರರನ್ನು ಆಯ್ಕೆ ಮಾಡಿದೆ. ಎರಡನೇ ಟೆಸ್ಟ್‌ನಲ್ಲಿ ಶಾನ್ ಮಸೂದ್ ತಂಡವು ಪ್ರಬಲ ಪುನರಾಗಮನವನ್ನು ಮಾಡಿತು. ಇಂಗ್ಲೆಂಡ್ ಅನ್ನು 152 ರನ್‌ಗಳ ಅಂತರದಿಂದ ಸೋಲಿಸಿತು. ಸುಮಾರು 4 ವರ್ಷಗಳ ನಂತರ ಪಾಕಿಸ್ತಾನ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದೆ.(ಏಜೆನ್ಸೀಸ್)