13 ಸಾವಿರ ಅಡಿ ಎತ್ತರದಲ್ಲಿ ಮಹಾಕುಂಭದ ಧ್ವಜ ಹಾರಿಸಿದ ಹುಡುಗಿ; Viral Video ನೋಡಿ ಪ್ರಶಂಸಿದ ನೆಟ್ಟಿಗರು

Untitled design - 2025-01-11T193224.013
Published on

ಮಹಾಕುಂಭ 2025 ನೋಡಲು ಇಷ್ಟವಿದ್ದರೂ ವಿವಿಧ ಕಾರಣಗಳಿಂದ ಪುಣ್ಯಭೂಮಿಯಾದ ಪ್ರಯಾಗ್‌ರಾಜ್‌ಗೆ ಇನ್ನೂ ತಲುಪದೇ ಇರುವ ಅನೇಕ ಜನರಿದ್ದಾರೆ. ಆದರೆ ಈಗಲೂ ಅವರು ಮಹಾಕುಂಭವನ್ನು ಇಡೀ ಜಗತ್ತಿಗೆ ಕೊಂಡೊಯ್ಯುವಲ್ಲಿ ತಮ್ಮ ಪ್ರಯತ್ನವನ್ನು ಮಾಡುತ್ತಾರೆ. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Viral Video). ಅದರಲ್ಲಿ ಹುಡುಗಿಯೊಬ್ಬಳು ನೆಲದಿಂದ 13 ಸಾವಿರ ಅಡಿ ಎತ್ತರಕ್ಕೆ ಸ್ಕೈಡೈವಿಂಗ್ ಮಾಡುವ ಮೂಲಕ ಕೊಡುಗೆ ನೀಡಿರುವುದನ್ನು ನೋಡಬಹುದು.

ವಿಡಿಯೋದಲ್ಲಿ ಬ್ಯಾಂಕಾಕ್‌ನಲ್ಲಿ ಸ್ಕೈಡೈವಿಂಗ್ ಮಾಡುವಾಗ ಹುಡುಗಿಯೊಬ್ಬಳು ನೆಲದಿಂದ 13 ಸಾವಿರ ಅಡಿ ಎತ್ತರದಲ್ಲಿ ಪ್ರಯಾಗರಾಜ್ ಮಹಾಕುಂಭದ ಧ್ವಜವನ್ನು ಹಾರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ವಿಡಿಯೋವನ್ನು ವೀಕ್ಷಿಸಿದ ಅನೇಕರು ಹುಡುಗಿಯ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಅನಾಮಿಕಾ ಶರ್ಮಾ ಎಂಬ ಹುಡುಗಿ ವಿಮಾನದಿಂದ ಜಿಗಿಯುವುದನ್ನು ನೋಡಬಹುದು. ಬ್ಯಾಂಕಾಕ್‌ನಲ್ಲಿ ಪ್ರಯಾಗರಾಜ್ ಮಹಾಕುಂಭದ ಧ್ವಜವನ್ನು ಬೀಸುತ್ತಿರುವುದನ್ನು ಕಾಣಬಹುದು. ಕ್ಲಿಪ್‌ನ ಮೊದಲ 40 ಸೆಕೆಂಡುಗಳಲ್ಲಿ ಹುಡುಗಿ ಗಾಳಿಯಲ್ಲಿ ಸ್ಕೈಡೈವಿಂಗ್ ಮಾಡುವುದನ್ನು ಕಾಣಬಹುದು. ಆದರೆ ಮುಂದಿನ 27 ಸೆಕೆಂಡುಗಳಲ್ಲಿ ಸ್ಕೈಡೈವಿಂಗ್‌ಗೆ ಮುಂಚಿನ ದೃಶ್ಯವನ್ನು ಕಾಣಬಹುದು.

ಇದುವರೆಗೂ ಈ ವಿಡಿಯೋವನ್ನು 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳು, ಇದು ನಿಜವಾಗಿಯೂ ಅದ್ಭುತವಾಗಿದೆ, ವಾಹ್ ಎಂಥಾ ವಿಷಯ ಸತ್ಯ ಸನಾತನ ಧರ್ಮಕ್ಕೆ ಜೈ.. ಜೈ.. ಜೈ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net