ಹಿಮಪಾತದ ನಡುವೆ ಹೆಪ್ಪುಗಟ್ಟಿದ ನೀರಿಗಿಳಿದ ವ್ಯಕ್ತಿ; Viral Video ನೋಡಿ ಹೊಗಳಿದ ನೆಟ್ಟಿಗರು

Untitled design - 2025-01-10T190249.342
Published on

ಧರ್ಮಶಾಲಾ: ಚಳಿಗಾಲ ಅಥವಾ ಮಳೆಗಾಲ ಬಂದಾಗ ಶೀತದ ಸಮಯದಲ್ಲಿ ಜನರು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸುತ್ತಾರೆ.ಉತ್ತಮ ಬಟ್ಟೆಗಳನ್ನು ತೊಡುವ ಮೂಲಕ ದೇಹವನ್ನು ಬೆಚ್ಚಗಿಡಲು ಪ್ರಯತ್ನಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು(Viral Video) ಹರಿದಾಡುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬರು -13 ಡಿಗ್ರಿ ತಾಪಮಾನವಿರುವ ಮಂಜುಗೆಡ್ಡೆಯ ನೀರಿಗೆ ಇಳಿದಿದ್ದಾರೆ.

ವಾಸ್ತವವಾಗಿ ವೈರಲ್​ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನೀರಿಗೆ ಇಳಿದು, ನೀರಿನಲ್ಲಿ ಏನನ್ನೋ ತೆಗೆಯುತ್ತಿರುವುದನ್ನು ನೋಡಬಹುದು. ಅಸಲಿಗೆ ಅವರು ಜಲಶಕ್ತಿ ಇಲಾಖೆ ನೌಕರರಾಗಿದ್ದಾರೆ. ಬಟ್ಟೆಯಿಲ್ಲದೆ ಚಳಿಯಲ್ಲಿ ಬರಿ ಒಳಉಡುಪಿನಲ್ಲಿ ಮಂಜುಗಡ್ಡೆಯಿಂದ ಕೂಡಿರುವ ನೀರಿನಲ್ಲಿ ಇಳಿದಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಕೂಡ ಹಂಚಿಕೊಂಡು ಉದ್ಯೋಗಿಗಳನ್ನು ಹೊಗಳಿದ್ದಾರೆ.

12 ಸೆಕೆಂಡ್​ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಉದ್ಯೋಗಿಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಯಾವುದೇ ಸುರಕ್ಷತಾ ಕಿಟ್ ಅಥವಾ ಯಾವುದೇ ಸಾಧನವಿಲ್ಲ, ನಾಚಿಕೆಯಾಗಬೇಕು ನಿಮಗೆ, ನೀವೇಅಂತಹ ತಣ್ಣೀರಿಗೆ ಹೋಗಿದ್ದರೆ ನಾವು ಕೂಡ ನಿಮ್ಮನ್ನು ಹೀಗೆಯೇ ಹೊಗಳುತ್ತಿದ್ದೆವು, ಅವರಿಗೆ ಬಹುಮಾನ ನೀಡಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net