ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಸುತ್ತಮುತ್ತಲಿನ ಅರಣ್ಯದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಮಂಗಳವಾರ ರಾತ್ರಿಯಿಂದ ಈ ಬೆಂಕಿಯ ಕೆನ್ನಾಲಿಗೆ ಹರಡಿದೆ. ಈ ಭೀಕರ ಬೆಂಕಿಯಿಂದ ಸಾವಿರಾರು ಕಟ್ಟಡಗಳು ನಾಶವಾಗಿವೆ. ಬೆಂಕಿಯ ಅನಾಹುತದ ಲೆಕ್ಕವಿಲ್ಲದಷ್ಟು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿವೆ. ಅದರಲ್ಲಿ ಜಿಂಕೆ ಮರಿಯೊಂದು ದಾರಿತಪ್ಪಿದಂತೆ ಹುಡುಕಾಡುವುದನ್ನು ನೋಡಬಹುದು.
ಇದನ್ನು ಓದಿ: ರೂಮ್ ಹೀಟರ್ನಲ್ಲಿ ಚಪಾತಿ ಮಾಡಿದ ಮಹಿಳೆ; Viral Video ನೋಡಿ ರಿಸ್ಕಿ ಜುಗಾಡ್ ಎಂದ ನೆಟ್ಟಿಗರು
ಆ ಜಿಂಕೆಮರಿಯನ್ನು ನೋಡಿದರೆ ನೀವು ಮೂಕವಿಸ್ಮಿತರಾಗುತ್ತೀರಿ. ಕಾಡಿನ ಬೆಂಕಿಯು ನಿಸ್ಸಂಶಯವಾಗಿ ಕಾಡು ಪ್ರಾಣಿಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ವಿನಾಶ ಸಂಭವಿಸಿದೆ. ಮಾತನಾಡಲು ಬಾರದ ಕಾಡಿನ ಪ್ರಾಣಿಗಳು ತಮ್ಮನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ವಿಡಿಯೋ ನೋಡಿದರೆ ಸಾಕು.
ವೈರಲ್ ವಿಡಿಯೋದಲ್ಲಿ ಜಿಂಕೆ ಮರಿ ತನ್ನನ್ನು ಬೆಂಕಿಯಿಂದ ರಕ್ಷಿಸಿಕೊಂಡು ರಸ್ತೆಗೆ ಬಂದಿರುವುದನ್ನು ನೋಡಬಹುದು. ಜಾತ್ರೆಯಲ್ಲಿ ಕಳೆದುಹೋಗಿರುವ ಮಗುವಿನಂತೆ ಜಿಂಕೆಯು ರಸ್ತೆಯಲ್ಲಿ ತನ್ನ ದಾರಿ ತಿಳಿಯದೆ ಬಿರುಸಿನಲ್ಲಿ ಓಡಾಡುತ್ತಿದೆ. ಆ ಪ್ರಾಣಿಯ ಸ್ಥಿತಿಯನ್ನು ನೋಡಿದರೆ ಇತರೆ ಕಾಡುಪ್ರಾಣಿಗಳ ಪರಿಸ್ಥಿತಿ ನೆನೆದು ತುಂಬಾ ದುಃಖಕರವಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
Heartbreaking @NBCLA footage shows a deer running through Altadena as a wildfire burns over 10,000 acres. pic.twitter.com/kBMeoa38SP
— Jacob Wheeler (@JWheelertv) January 8, 2025
ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಸಹಾಯಕ ಭಾವನೆ, ಯಾರಾದರೂ ದಯವಿಟ್ಟು ಅವರನ್ನು ಉಳಿಸಿ, ಹೇಳಲು ಪದಗಳಿಲ್ಲ ಆದರೆ ಹೃದಯವು ಅಳುತ್ತಿದೆ, ಅವರು ಬದುಕುಳಿದರು ಆದರೆ ಎಷ್ಟು ಮಂದಿ ಧ್ವನಿಯಿಲ್ಲದ ಪ್ರಾಣಿಗಳು ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)
ಹಿಮಪಾತದ ನಡುವೆ ಹೆಪ್ಪುಗಟ್ಟಿದ ನೀರಿಗಿಳಿದ ವ್ಯಕ್ತಿ; Viral Video ನೋಡಿ ಹೊಗಳಿದ ನೆಟ್ಟಿಗರು