More

  ಐಸ್​ಕ್ರೀಂನೊಂದಿಗೆ ಮೊಟ್ಟೆಗಳನ್ನು ಕಲಿಸಿಕೊಂಡು ತಿಂದ; ಇದ್ಯಾವ ಕಾಂಬಿನೇಷನ್​ ಗುರು ಎಂದ ನೆಟ್ಟಿಗರು

  ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಜನರು ಹೆಚ್ಚಾಗಿ ತಂಪು ಪಾನೀಯ ಹಾಗೂ ಐಸ್​ಕ್ರೀಂ ಮೊರೆ ಹೋಗುತ್ತಿದ್ದಾರೆ. ಐಸ್​ಕ್ರೀಂನಲ್ಲಿ ತರಹೇವಾರಿ ಫ್ಲೇವರ್​ಗಳಿದ್ದು, ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಐಸ್​ಕ್ರೀಂಅನ್ನು ಎಂದಾದರು ನೀವು ಮೊಟ್ಟೆಯೊಂದಿಗೆ ಸೇವಿಸಿದ್ದೀರಾ ಅದು ಕೂಡ ಉಪ್ಪಿನ ಜೊತೆಗೆ ಎಂದರೆ ನೀವು ಶಾಕ್​ ಆಗುವುದಂತು ಖಂಡಿತಾ.

  ಈ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವ್ಯಕ್ತಿ ಬಾತುಕೋಳಿಯ ಮೊಟ್ಟೆಗೆ ಉಪ್ಪನ್ನು ಸೇರಿಸಿ ಐಸ್​ಕ್ರೀಂ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಆಶ್ಚರ್ಯಚಕಿತರಾಗಿದ್ದಾರೆ.

  ತಮ್ಮ ಫುಡ್​ಬ್ಲಾಗ್​ ಹಾಗೂ ವಿಭಿನ್ನ ಪ್ರಯೋಗಗಳ ಮೂಲಕ ಹೆಸರುವಾಸಿಯಾಗಿರುವ​ ಕ್ಯಾಲ್ವಿನ್​ ಲೀ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಐಸ್​ಕ್ರೀಂ ಜೊತೆಗೆ ಬಾತುಕೋಳಿ ಮೊಟ್ಟೆಗಳನ್ನು ಸೇವಿಸುತ್ತಿರುವುದನ್ನು ನೋಡಬಹುದಾಗಿದೆ. ಸಾಲ್ಟೆಡ್​ ಎಗ್​ ಐಸ್​ಕ್ರೀಂ ಖಾದ್ಯವನ್ನು ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ಯಾಲ್ವಿನ್​ ಲೀ ಮಾತ್ರತಮ್ಮ ಪ್ರಯೋಗವನ್ನು ಹಾಡಿ ಹೊಗಳಿದ್ದಾರೆ. ಮತ್ತು ಜನರಿಗೆ ಪ್ರಯತ್ನಿಸುವಂತೆ ಸಲಹೆ ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts