ಬೀಜಿಂಗ್: ನಾನು ಚಿಕ್ಕವರಿದ್ದಾಗ ಹಾಗೂ ಪ್ರಸ್ತುತ ಇರುವ ಚಿಕ್ಕಮಕ್ಕಳು ಕೇಳುವ ಒಂದು ಸಾಮಾನ್ಯ ಕಥೆ ಎಂದರೆ ಅದು ಆಮೆ ಮತ್ತು ಮೊಲದ ಕಥೆ. ಅದೇ ಓಟದ ಸ್ಪರ್ಧೆಯಲ್ಲಿ ಚಾಣಾಕ್ಷತನದಿಂದ ಮೊಲವನ್ನು ಆಮೆ ಸೋಲಿಸುವ ಕಥೆ. ಈಗ ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ವಿಡಿಯೋ(Viral Video) ನೋಡಿ ನಾವು ಕೇಳಿದ ಕಥೆ ನಿಜವೆ?.
ಇದನ್ನು ಓದಿ: Viral Video | ಚಿಂದಿ ಆಯುವ ತಂದೆಯಿಂದ ಮಗನಿಗೆ ಐಫೋನ್ ಗಿಫ್ಟ್; ಡ್ಯಾಡ್ ಆಫ್ ದಿ ಇಯರ್ ಎಂದ ನೆಟ್ಟಿಗರು
ಕಥೆ ಕೇಳಿದ ನಮಗೆ, ಇದು ನಿಜವೆ ಎಂದು ಎನ್ನಿಸುತಿತ್ತು. ಆಮೆಯು ಓಟದಲ್ಲಿ ಮೊಲವನ್ನು ಸೋಲಿಸುವುದು ಹೇಗೆ ಸಾಧ್ಯ. ಮೊಲ ನೋಡಿದರೆ ಎಲ್ಲೆಂದರಲ್ಲಿ ಓಡುತ್ತದೆ ಆದರೆ ಆಮೆಗೆ ಓಡಲು ಸಾಧ್ಯವಿಲ್ಲ ನಿಧಾನವಾಗಿ ಚಲಿಸುತ್ತದೆ. ಇದು ಕಥೆಯಷ್ಟೆ ಎಂದು ಭಾವಿಸುವುದು ಸುಳ್ಳಲ್ಲ. ಆದರೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಮೆ ಮತ್ತು ಮೊಲದ ನಡುವೆ ಓಟದ ಸ್ಪರ್ಧೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದವರನ್ನು ಆಶ್ಚರ್ಯಗೊಳಿಸಿದೆ. ವೈರಲ್ ವಿಡಿಯೋದಲ್ಲಿ ಆರಂಭದಲ್ಲಿ ಓಟವು ಪ್ರಾರಂಭವಾದಾಗ ಮೊಲವು ಮುಂದೆ ಹೋಗುತ್ತದೆ. ಆದರೆ ಮಧ್ಯದಲ್ಲಿ ನಿಲ್ಲುತ್ತದೆ. ಮತ್ತೊಂದೆಡೆ ಆಮೆಯು ತನ್ನ ನಿಧಾನಗತಿಯಲ್ಲಿ ಮುಂದೆ ಸಾಗುತ್ತಿರುತ್ತದೆ. ಕೊನೆಗೆ ಏನಾಯಿತು ಎಂಬುದು ಕಥೆಯಲ್ಲಿ ನಾವೆಲ್ಲರೂ ಕೇಳಿದ್ದೇವೆ.
ವಿಡಿಯೋವನ್ನು ಆಮೆ ಮತ್ತು ಮೊಲದ ಪ್ರಸಿದ್ಧ ಕಥೆಯನ್ನು ನಿಜ ಜೀವನದಲ್ಲಿ ಪರೀಕ್ಷಿಸಿದಾಗ ಎಂಬ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ. ಶೇರ್ ಆದ ಬಳಿಕ ಇದುವರೆಗೂ ವಿಡಿಯೋವನ್ನು 5.7 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 68 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಪೋಸ್ಟ್‌ಗೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಕಥೆ ನಿಜವಾಗಿದೆ, ಆಮೆ ಓಟದಲ್ಲಿ ಮೊಲವನ್ನು ಸೋಲಿಸಿದೆ, ನಾವು ಬಾಲ್ಯದಿಂದಲೂ ಕೇಳುತ್ತಿರುವ ಕಥೆ ಸಂಪೂರ್ಣವಾಗಿ ಸತ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಆಮೆ ಮತ್ತು ಮೊಲದ ಕಥೆ ಏನು?:
ಒಮ್ಮೆ ಮೊಲವೊಂದು ತನ್ನ ವೇಗದ ಬಗ್ಗೆ ಹೆಮ್ಮೆಪಟ್ಟಿತು. ಅಂತಹ ಪರಿಸ್ಥಿತಿಯಲ್ಲಿ ಎಲ್ಲರೊಂದಿಗೆ ರೇಸಿಂಗ್ ಮಾಡಲು ಇಚ್ಛಿಸುವುದಾಗಿ ತಿಳಿಸಿ ಆಮೆಗೆ ಸವಾಲನ್ನು ಮಾಡುತ್ತದೆ. ಆಮೆ ಸವಾಲನ್ನು ಸ್ವೀಕರಿಸಿತು. ಇಬ್ಬರ ನಡುವೆ ಪೈಪೋಟಿ ನಡೆದಿದೆ. ಮೊಲವು ಬಹಳ ವೇಗವಾಗಿ ಓಡಿ ಬಹಳ ಮುಂದೆ ತಲುಪುತ್ತದೆ. ಹಿಂತಿರುಗಿ ನೋಡಿದಾಗ ಆಮೆ ದೂರದವರೆಗೂ ಕಾಣುವುದಿಲ್ಲ. ನಂತರ ಆಮೆ ಇಲ್ಲಿಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸಿದ ಮೊಲ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಪ್ರಾರಂಭಿಸುತ್ತದೆ. ಆದರೆ ಮಲಗಿರುವಾಗ ಯಾವಾಗ ನಿದ್ದೆ ಬಂದಿತೆಂದು ಮೊಲಕ್ಕೆ ತಿಳಿಯುವುದಿಲ್ಲ.
ಮತ್ತೊಂದೆಡೆ, ಆಮೆ ರಾಜ ಮೊಲವನ್ನು ಬಿಟ್ಟು ನಿಧಾನವಾಗಿ ಮುಂದೆ ಸಾಗುತ್ತದೆ. ಬಹಳ ಹೊತ್ತಿನ ನಂತರ ಮೊಲದ ಕಣ್ಣು ತೆರೆದಾಗ ಆಮೆ ಗುರಿ ಮುಟ್ಟುವ ಹಂತದಲ್ಲಿತ್ತು. ಮೊಲವು ವೇಗವಾಗಿ ಓಡಿತು ಆದರೆ ಅದು ತುಂಬಾ ತಡವಾಗಿತ್ತು. ಆಮೆ ಸ್ಪರ್ಧೆಯನ್ನು ಗೆದ್ದಿತ್ತು ಎಂಬುದು ಕಥೆ. ಈ ಕಥೆಯಿಂದ ಕಲಿತ ಪಾಠ ಏನೆಂದರೆ ಯಾರನ್ನೂ ನಿಮಗಿಂತ ಕಡಿಮೆ ಎಂದು ಪರಿಗಣಿಸಬೇಡಿ. ಏಕೆಂದರೆ ನಿಧಾನ ಮತ್ತು ಸ್ಥಿರವಾದವನು ಮಾತ್ರ ಓಟವನ್ನು ಗೆಲ್ಲುತ್ತಾನೆ. (ಏಜೆನ್ಸೀಸ್)
Viral Video | ‘ಮಹಾಭಾರತ’ ಟೈಟಲ್ ಟ್ರ್ಯಾಕ್ಗೆ ಹುಡುಗಿಯರ ನೃತ್ಯ; ಡ್ಯಾನ್ಸ್ಗೆ ನೆಟ್ಟಿಗರ ಪ್ರಶಂಸೆ