

ಮಗ ಬೋರ್ಡ್ ಎಕ್ಸಾಂನಲ್ಲಿ ಉತ್ತಮ ಫಲಿತಾಂಶ ಪಡೆದ ಖುಷಿಯಿಂದಾಗಿ ಚಿಂದಿ ಆಯುವ ತಂದೆ ನೀಡಿರುವ ಉಡುಗೊರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲೆಟೆಸ್ಟ್ ಟ್ರೆಂಡ್ ಆಗಿದೆ. ಫಾದರ್ ಆಫ್ ದಿ ಇಯರ್ ಎಂದು ಬಿರುದು ನೀಡುವ ಮೂಲಕ ಗೌರವಿಸಲಾಗಿದೆ. ಆದರೆ ವೈರಲ್ ಆಗಿರುವ ವಿಡಿಯೋ(Viral Video)ದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.
ವೈರಲ್ ವಿಡಿಯೋದಲ್ಲಿ ಚಿಂದಿ ಆಯುವ ವ್ಯಕ್ತಿಯು ಐಫೋನ್ ಹಿಡಿದಿರುವುದನ್ನ ಕಾಣಬಹುದಾಗಿದೆ. ಆತ ಜನರೊಂದಿಗೆ ಮಾತನಾಡುತ್ತ ಹೆಮ್ಮೆಯಿಂದ ಸಂಭ್ರಮಿಸುತ್ತಿರುವುದನ್ನು ನೋಡಬಹುದು. ಆದರೆ ಮಗನ ಸಾಧನೆಯನ್ನು ಮೆಚ್ಚುತ್ತಾ ಮಾತನಾಡುತ ತಂದೆಯ ಮಾತುಗಳು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಮಗನಿಗೆ 1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್ 16 ಅನ್ನು ಉಡುಗೊರೆಯಾಗಿ ನೀಡಿ, ತಾನು 85,000 ರೂಪಾಯಿ ಮೌಲ್ಯದ ಐಫೋನ್ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. 'ಘರ್ ಕೆ ಕಲಾಶ್' ಹೆಸರಿನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋದ ಮೂಲವನ್ನು ಇನ್ನು ದೃಢೀಕರಿಸಲಾಗಿಲ್ಲ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ತನ್ನ ಮಗ ಬೋರ್ಡ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವುದಕ್ಕೆ ನೀಡಿರುವ ಗಿಫ್ಟ್ ಐಫೋನ್ನ ಬೆಲೆಗಿಂತ ಆತನ ತಂದೆಯ ನಗುವೆ ಹೆಚ್ಚು ಮೌಲ್ಯವಾಗಿದೆ. ಈ ವ್ಯಕ್ತಿಯ ಎಲ್ಲಾ ಹಣವನ್ನು ಇಲ್ಲಿ ಖರ್ಚು ಮಾಡಲಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ. ಅವನ ತಂದೆಯಿಂದ ಮಗನಿಗೆ ಮಿಲಿಯನ್ ಡಾಲರ್ ಉಡುಗೊರೆ ಎಂದು ಕೂಡ ಟೀಕಿಸಲಾಗಿದೆ.