ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ರೋಡ್ ರೇಜ್ (Road Rage) ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಚೆಗೆ ಮುಂಬೈನಲ್ಲಿ ತನ್ನ ತಪ್ಪಿಲ್ಲದಿದ್ದರೂ ವ್ಯಕ್ತಿಯೋರ್ವನನ್ನು ಸುಖಾಸುಮ್ಮನೆ ಥಳಿಸಿ ಕೊಲ್ಲಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಸದ್ದು ಮಾಡಿತ್ತು. ಇದೀಗ ಈ ಪ್ರಕರಣ ಮಾಸುವ ಮುನ್ನವೇ ಹೈದರಾಬಾದಿನಲ್ಲಿ (Hydrebad) ಇದೇ ರೀತಿಯ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೈದರಾಬಾದ್ನ (Hydrebad) ಅಲ್ವಾಲ್ (Alwal) ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ದಾಟುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರು ಬೈಕ್ ಸವಾರನಿಗೆ ನಿಧಾನಕ್ಕೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಬೈಕ್ ಸವಾರ (Bike Rider) ಒಂದೇ ಏಟಿಗೆ ವೃದ್ಧನನ್ನು ಕೊಂದು ಹಾಕಿದ್ದು, ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
#Hyderabad: An elderly man was brutally attacked in Alwal by a motorbike rider following a confrontation. The incident occurred when the elderly man asked the rider, who was speeding, to slow down pic.twitter.com/jD9GdsggiX
— Hyderabadinlast24hrs (@hyderabadinlast) October 18, 2024
ಇದನ್ನೂ ಓದಿ: Bigg Boss ಪ್ರಸಾರ ನಿಲ್ಲಿಸುವಂತೆ ತುರ್ತು ನೋಟಿಸ್ ಜಾರಿ; ಶೀಘ್ರದಲ್ಲೇ ಶೋ ಅಂತ್ಯ
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ಅಲ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜನನಿಬಿಡ ರಸ್ತೆಯೊಂದರಲ್ಲಿ ದಾಟಲು ಪರದಾಡುತ್ತಿರುತ್ತಾರೆ. ಈ ವೇಳೆ ವೃದ್ಧ (Senior Citizen) ಹೇಗೋ ಕಷ್ಟಪಟ್ಟು ರಸ್ತೆ ದಾಟಿದ್ದು, ವೇಗವಾಗಿ ಬಂದ ಬೈಕ್ ಸವಾರನೋರ್ವ (Bike Rider) ಅವರಿಗೆ ಡಿಕ್ಕಿ ಹೊಡೆಯುವದರಿಂದ ತಪ್ಪಿಸುತ್ತಾನೆ. ಈ ವೇಳೆ ವೃದ್ಧ ಆತನಿಗೆ ನಿಧಾನಕ್ಕೆ ಬೈಕ್ ಚಲಾಯಿಸುವಂತೆ ಹೇಳುತ್ತಾರೆ. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರ ಗಾಡಿಯನ್ನು ರಸ್ತೆಗೆ ಅಡ್ಡಾಲಾಗಿ ನಿಲ್ಲಿಸಿ ಬಂದು ವೃದ್ಧನನ್ನು (Senior Citizen) ತಳ್ಳಿ ಆ ನಂತರ ಒಂದು ಏಟು ಹೊಡೆಯುತ್ತಾನೆ. ಸವಾರನ ಏಟಿಗೆ ವೃದ್ಧ ಸ್ಥಳದಲ್ಲೇ ಕುಸಿದು ಬಿದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಗುರುವಾರ (ಅಕ್ಟೋಬರ್ 17) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer), ಮೃತರನ್ನುಆಂಜನೇಯುಲು ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಬೈಕ್ ಸವಾರನನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.