

ಒಬ್ಬ ವ್ಯಕ್ತಿಯು ದೃಢಸಂಕಲ್ಪವನ್ನು ಹೊಂದಿದ್ದರೆ ಆತನ ಹಾದಿಯಲ್ಲಿ ಯಾವುದೇ ಪರಿಸ್ಥಿತಿಯು ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಅದಕ್ಕೆ ಹೋಲುವಂತೆ ವ್ಯಕ್ತಿಯೊಬ್ಬರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯು ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಾರೆ. ಅಂಗವೈಕಲ್ಯತೆಯೂ ತನ್ನ ಕೆಲಸಕ್ಕೆ ಅಡ್ಡಿಯಲ್ಲ ಎಂಬಂತೆ ಸ್ಕೂಟರ್ ಅನ್ನು ಸ್ವತಃ ಚಲಾಯಿಸುತ್ತ ಫುಡ್ ಡೆಲಿವರಿ ಮಾಡಿತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಎರಡು ಕೈಗಳು ಇಲ್ಲದಿರುವುದನ್ನು ನೋಡಬಹುದು. ಅವರು ತನ್ನ ದ್ವಿಚಕ್ರ ವಾಹನವನ್ನು ಅತ್ಯಂತ ಆತ್ಮವಿಶ್ವಾಸದಿಂದ ಓಡಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಒಬ್ಬ ವ್ಯಕ್ತಿ, ಅಂಕಲ್ ನೀವು ಇದನ್ನು ಓಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ ಸ್ಮೈಲ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಇದುವರೆಗು 18 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಆ ವ್ಯಕ್ತಿಯ ಕೆಲಸಕ್ಕೆ ಹೊಗಳಿದ್ದಾರೆ. ಇವರು ಪರಿಸ್ಥಿತಿಯನ್ನು ದೂಷಿಸದ ನಿಜವಾದ ನಾಯಕ, ಕೆಲವರು ಎಲ್ಲವೂ ಸರಿಯಾಗಿದ್ದರೂ ಅಳುತ್ತಲೇ ಇರುತ್ತಾರೆ, ಅವರಿಗೆ ಸೆಲ್ಯೂಟ್, ಎಲ್ಲಾ ಕಷ್ಟಗಳನ್ನು ನಿವಾರಿಸುವ ಇವರನ್ನು ದೇವರು ಆಶೀರ್ವದಿಸಲಿ ಎಂದು ಕಾಮೆಂಟ್ ಮಾಡಿದ್ದಾರೆ.