ತಲೆಯ ಮೇಲೆ ಶಾರ್ಪ್​​ ಕತ್ತಿ; ಬೆಲ್ಲಿ ಡ್ಯಾನ್ಸ್ ಮಾಡಿದ ಹುಡಗಿಯ ​VIdeo Viral

Untitled design - 2024-10-28T181841.557
Published on

ರಾಯಪುರ : ಬೆಲ್ಲಿ ಡ್ಯಾನ್ಸ್ ಒಂದು ನೃತ್ಯ ಪ್ರಕಾರವಾಗಿದ್ದು ಅದನ್ನು ಮಾಡುವುದು ಸುಲಭವಲ್ಲ. ಹಲವಾರು ತಿಂಗಳ ಉತ್ತಮ ತರಬೇತಿ ಪಡೆದ ನಂತರ ಪರಿಪೂರ್ಣತೆಯಿಂದ ಈ ನೃತ್ಯ ಮಾಡಲು ಸಾಧ್ಯವಾಗುತ್ತದೆ. ಬಾಲಿವುಡ್​ನ ಕೆಲ ಸೆಲಿಬ್ರಿಟಿಗಳು ಬೆಲ್ಲಿ ಡ್ಯಾನ್ಸ್​​ ಮಾಡುವುದನ್ನು ನೋಡಿರುತ್ತೀರಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ಬೆಲ್ಲಿ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ವೈರಲ್​(​VIdeo Viral) ಆಗಿದೆ. ಅದರೆ ಈ ನೃತ್ಯದಲ್ಲಿ ವಿಶೇಷತೆ ಇದೆ. ಅದನ್ನು ಕಂಡು ನೆಟ್ಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ವೈರಲ್​​​ ವಿಡಿಯೋದಲ್ಲಿ ಓಂಕಾರ' ಚಿತ್ರದ 'ನಮಕ್ ಇಷ್ಕ್ ಕಾ' ಹಾಡಿಗೆ ಹುಡುಗಿ ಬೆಲ್ಲಿ ಡ್ಯಾನ್ಸ್​ ಮಾಡಿರುವುದನ್ನು ನೋಡಬಹುದು. ಆದರೆ ಡ್ಯಾನ್ಸ್​ ಮಾಡುವಾಗ ಆ ಹುಡಗಿ ತನ್ನ ತಲೆಯ ಮೇಲೆ ಕತ್ತಿಯನ್ನು ಇಟ್ಟುಕೊಂಡಿದ್ದಾಳೆ. ಅದನ್ನು ಬ್ಯಾಲೆನ್ಸ್​ ಮಾಡುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋ ಛತ್ತೀಸ್​ಗಢದಿಂದ ಬಂದಿದೆ ಎನ್ನಲಾಗಿದೆ.

ಈ ಖಡ್ಗವು 10 ವರ್ಷಕ್ಕಿಂತ ಹಳೆಯದಾಗಿದೆ ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ಪೋಸ್ಟ್​​​ನ್ನು 2 ಮಿಲಿಯನ್​ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋವನ್ನು 1 ಲಕ್ಷ 80 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿನ ಬೀರುವಿನ ಗಾಜು ಒಡೆದಿದ್ದರೆ ಅದನ್ನು ಪರಿಶೀಲಿಸಿ, ನೃತ್ಯವನ್ನು ನೋಡಿ ನನ್ನ ಆತಂಕದ ಮಟ್ಟವು ಎಲ್ಲಿಗೋ ತಲುಪಿತು, ನಿಮ್ಮ ನೃತ್ಯವು ಶ್ಲಾಘನೀಯ ಕತ್ತಿಯನ್ನು ಬಹುಶಃ ಗಮ್​ನಿಂದ ತಲೆಗೆ ಅಂಟಿಸಿರಬಹುದು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net