ಬರ್ಸಾನಾದ ಹೋಳಿ ವಿಶ್ವಪ್ರಸಿದ್ಧವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಹೋಳಿ ಆಡಲು ಇಲ್ಲಿಗೆ ಬರುತ್ತಾರೆ. ಲಕ್ಷಾಂತರ ಜನ ಸೇರಿದಾಗ ಹೋಳಿಯಲ್ಲಿ ಜನಸಂದಣಿ ಇರುವುದು ಸಹಜ. ಆ ಜನಸಮೂಹದೊಳಗೆ ಒಂದು ಗೂಳಿ ಪ್ರವೇಶಿಸಿದರೆ ಏನಾಗಬಹುದು? ಸದ್ಯ ಅಲ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ(Viral Video). ವಿಡಿಯೋದಲ್ಲಿ ಗೂಳಿಯೊಂದು ಹೋಳಿ ಆಡುತ್ತಿರುವ ಜನಸಮೂಹದೊಳಗೆ ಪ್ರವೇಶಿಸಿದೆ.
ಇದನ್ನು ಓದಿ: ಆಕ್ಟೋಪಸ್ ಕೆಣಕಿ ಪ್ರಾಣಕ್ಕೆ ಕುತ್ತು ತಂದುಕೊಂಡ ವ್ಯಕ್ತಿ; Viral Video ನೋಡಿ ನೆಟ್ಟಿಗರು ಗರಂ
ವೈರಲ್ ವಿಡಿಯೋದಲ್ಲಿ ಜನರ ಗುಂಪೊಂದು ಬಣ್ಣಗಳೊಂದಿಗೆ ಆಟವಾಡುವುದನ್ನು ಕಾಣಬಹುದು. ಈ ಸಮಯದಲ್ಲಿ ಒಂದು ಗೂಳಿಯು ತನ್ನ ಪೂರ್ಣ ಬಲದಿಂದ ಜನಸಮೂಹವನ್ನು ಪ್ರವೇಶಿಸುತ್ತದೆ. ಅದರ ಸ್ವಭಾವದಂತೆಯೇ ಜನರನ್ನು ಪಕ್ಕಕ್ಕೆ ತಳ್ಳಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಗೂಳಿಯನ್ನು ನೋಡಿದ ತಕ್ಷಣ ಜನರು ಎಷ್ಟು ಭಯಭೀತರಾಗುತ್ತಾರೆಂದರೆ ಯಾರಿಗೂ ದಾರಿ ಮಾಡಿಕೊಡದ ಜನಸಮೂಹ ಕೂಡ ಹೋರಿಗೆ ದಾರಿ ಮಾಡಿಕೊಡಲು ಪ್ರಾರಂಭಿಸುತ್ತದೆ. ಇದಕ್ಕೆ ಕಾರಣವೆಂದರೆ ಗುಂಪಿನಲ್ಲಿದ್ದ ಜನರಿಗೆ ಗೂಳಿಯ ಶಕ್ತಿಯ ಅರಿವಿದೆ. ಜನರು ಆ ಗೂಳಿಗೂ ಬಣ್ಣ ಹಾಕುವ ಮೂಲಕ ಗೂಳಿಯೊಂದಿಗೆ ಹೋಳಿ ಆಚರಿಸಿದ್ದಾರೆ.
ಈ 16 ಸೆಕೆಂಡಗಳ ವಿಡಿಯೋವನ್ನು ಇದುವರೆಗೂ 19 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾನು ಎಲ್ಲಿಗೆ ಬಂದಿದ್ದೇನೆ ಎಂದು ಗೂಳಿ ಕೂಡ ಆಶ್ಚರ್ಯ ಪಡುತ್ತಿರಬೇಕು, ಗೂಳಿ ಒಮ್ಮೆ ತನ್ನ ತಲೆಯನ್ನು ಮೇಲಕ್ಕೆ ಮತ್ತು ಕೆಳಕ್ಕೆ ಆಡಿಸಿದರೆ ನೀವು ಮೊದಲ ಮಹಡಿಯನ್ನು ತಲುಪುತ್ತೀರಿ, ಬ್ರದರ್ ಈ ವಿಡಿಯೋ ನೋಡುವುದು ಖುಷಿ ಕೊಟ್ಟಿತು ಎಂದು ಕಾಮೆಂಟ್ ಮಾಡಿದ್ದಾರೆ.
ರೀಲ್ಸ್ಗಾಗಿ ಮಗುವಿನ ಮೇಲೆ ಹಾವು ಬಿಟ್ಟ ಮಹಾನುಭವರು; Viral Video ನೋಡಿ ಜೀವದ ಜತೆ ಆಟ ಬೇಡ ಎಂದ ನೆಟ್ಟಿಗರು