ಆಕ್ಟೋಪಸ್​ ಕೆಣಕಿ ಪ್ರಾಣಕ್ಕೆ ಕುತ್ತು ತಂದುಕೊಂಡ ವ್ಯಕ್ತಿ; Viral Video ನೋಡಿ ನೆಟ್ಟಿಗರು ಗರಂ

blank

ಭೂಮಿ ಮೇಲಿರಲಿ ಅಥವಾ ನೀರಿನಲ್ಲಿರಲಿ ಯಾವುದೇ ಪ್ರಾಣಿಗಳು ತಮಗೆ ತೊಂದರೆ ನೀಡದಿದ್ದರೆ ಅಪಾಯವನ್ನು ಉಂಟುಮಾಡುವುದಿಲ್ಲ. ಆದರೆ ತೊಂದರೆ ಮಾಡುವವರಿಗೆ ಪ್ರತಿಕ್ರಿಯಿಸದೆ ಬಿಡುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಸಮುದ್ರದ ಆಳಕ್ಕೆ ಹೋಗುವ ಸ್ಕೂಬಾ ಡೈವಿಂಗ್​​​​ ಮೇಲೆಆಕ್ಟೋಪಸ್ ದಾಳಿ ಮಾಡಿರುವು ಭಯಾನಕ ಘಟನೆಯ ವಿಡಿಯೋ ವೈರಲ್(Viral Video)​ ಆಗಿದೆ.

ಇದನ್ನು ಓದಿ: ಹೋಳಿ ಹಬ್ಬಕ್ಕೆ ಬಲೂನುಗಳಿಂದ ಬಣ್ಣಗಳನ್ನು ಹಾರಿಸುವ ಹ್ಯಾಕ್​​; ರೀಲ್ಸ್​ ಮಾಡುವವರಿಗಾಗಿ ಈ ದೇಸಿ ಟ್ರಿಕ್​​ | Viral Video

ವಿಡಿಯೋದಲ್ಲಿ ಸ್ಕೂಬಾ ಡೈವಿಂಗ್​ ಮಾಡುತ್ತಿರುವ ವ್ಯಕ್ತಿಯು ಸಮುದ್ರದಲ್ಲಿ ಶಾಂತವಾದ ಆಕ್ಟೋಪಸ್ ಅನ್ನು ಸಮೀಪಿಸುತ್ತಿರುವುದನ್ನು ಕಾಣಬಹುದು. ಆದರೆ ಅವನು ದೂರದಿಂದ ನೋಡುವ ಬದಲು ಅದನ್ನು ಕೀಟಲೆ ಮಾಡಲು ಪ್ರಾರಂಭಿಸುತ್ತಾನೆ. ಅಲ್ಲದೆ ಕೋಲಿನಿಂದ ತಳ್ಳಿ ಅದನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ನಂತರ, ಆಕ್ಟೋಪಸ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುತ್ತದೆ.
ಆಕ್ಟೋಪಸ್​​​ ತನ್ನ ಗ್ರಹಣಾಂಗಗಳನ್ನು ಆ ವ್ಯಕ್ತಿಯ ಕುತ್ತಿಗೆ, ತೋಳು ಮತ್ತು ದವಡೆಯ ಸುತ್ತಲೂ ಸುತ್ತಲು ಪ್ರಾರಂಭಿಸುತ್ತದೆ. ಇದರಿಂದ ಬಿಡಿಸಿಕೊಳ್ಳಲು ಸ್ಕೂಬಾ ಡೈವಿಂಗ್​ ಮಾಡುವ ವ್ಯಕ್ತಿಯು ಭಯದಿಂದ ಕಷ್ಟಪಡುತ್ತಾನೆ. ಆಕ್ಟೋಪಸ್‌ನ ಹಿಡಿತ ಎಷ್ಟು ಬಲವಾಗಿತ್ತೆಂದರೆ ಆ ವ್ಯಕ್ತಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಸ್ವಲ್ಪ ಸಮಯದವರೆಗೆ ಅವನು ತನ್ನನ್ನು ತಾನು ಬಿಡಿಸಿಕೊಳ್ಳಲು ಹೆಣಗಾಡಿದನು. ಕೊನೆಗೆ ಅವನು ಆಕ್ಟೋಪಸ್‌ನ ಹಿಡಿತದಿಂದ ಬಿಡಿಸಿಕೊಂಡು ವೇಗವಾಗಿ ಮೇಲ್ಮೈ ಕಡೆಗೆ ಈಜುವುದನ್ನು ನೋಡಬಹುದು.

ವಿಡಿಯೋವನ್ನು ವಿವಿಧ ಸಾಮಾಜಿಕ ಜಾಲತಾಣಲದಲ್ಲಿ ಪೋಸ್ಟ್​ ಮಾಡಲಾಗುತ್ತಿದೆ. ಘಟನೆ ನಡೆದ ದಿನಾಂಕ ಮತ್ತು ಸ್ಥಳ ಬಹಿರಂಗವಾಗಿಲ್ಲವಾದರೂ, ಈ ವಿಡಿಯೋ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಆ ವ್ಯಕ್ತಿ ತನಗೆ ತಾನೇ ತೊಂದರೆ ತಂದುಕೊಂಡ, ಸಮುದ್ರದಲ್ಲಿ ಶಾಂತಿಯುತ ಪ್ರಾಣಿಗಳಿಗೆ ತೊಂದರೆ ಕೊಡುವುದು ಸರಿಯಲ್ಲ, ಆಕ್ಟೋಪಸ್‌ ಬಹಳ ಬುದ್ಧಿವಂತ ಜೀವಿಗಳು ಅದನ್ನು ಏಕಾಂಗಿಯಾಗಿ ಬಿಡಬೇಕು, ಈ ವಿಡಿಯೋ ಪ್ರಕೃತಿಯನ್ನು ಹಾಳುಮಾಡುವುದರಿಂದಾಗು ಕೆಟ್ಟ ಪರಿಣಾಮಗಳನ್ನು ತೋರಿಸುತ್ತಿದೆ.

ಸ್ಕೂಬಾ ಡೈವಿಂಗ್​​ ಮಾಡುತ್ತಿದ್ದ ವ್ಯಕ್ತಿ ಕಷ್ಟಪಡುತ್ತಿದ್ದಾಗ ಕ್ಯಾಮೆರಾ ಮ್ಯಾನ್ ಏಕೆ ಸಹಾಯ ಮಾಡಲಿಲ್ಲ?, ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ ಈ ಘಟನೆಯು ಮನುಷ್ಯರು ಮತ್ತು ಪ್ರಕೃತಿಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮಹತ್ವವನ್ನು ಎತ್ತಿ ತೋರಿಸಿದೆ, ಈ ಘಟನೆಯು ಪ್ರಕೃತಿಯನ್ನು ಗೌರವಿಸುವ ಪ್ರಮುಖ ಸಂದೇಶವನ್ನು ನೀಡುತ್ತದೆ, ಸಮುದ್ರ ಜೀವಿಗಳನ್ನು ಕೀಟಲೆ ಮಾಡುವುದು ಅಪಾಯಕಾರಿ, ಎಲ್ಲಾ ಜೀವಿಗಳ ಬಗ್ಗೆ ಗೌರವ ಮತ್ತು ಎಚ್ಚರಿಕೆಯನ್ನು ಹೊಂದಿರಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ಹುಲಿ & ಹುಲಿ ನಡುವಿನ ಭೀಕರ ಕಾದಾಟ; Viral Video ನೋಡಿ ಬೆರಗಾದ ನೆಟ್ಟಿಗರು

Share This Article

ಒಂದು ತಿಂಗಳು ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸದಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಶಾಕಿಂಗ್​ ಸಂಗತಿ… Tongue

Tongue : ನಾಲಿಗೆ ನಮ್ಮ ದೇಹದ ಪ್ರಮುಖ ಅಂಗ. ನಾಲಿಗೆ ಇಲ್ಲದಿದ್ದರೆ ಯಾವುದೇ ಆಹಾರ ರುಚಿಸುವುದಿಲ್ಲ.…

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…