ಹೋಳಿ ಹಬ್ಬಕ್ಕೆ ಬಲೂನುಗಳಿಂದ ಬಣ್ಣಗಳನ್ನು ಹಾರಿಸುವ ಹ್ಯಾಕ್​​; ರೀಲ್ಸ್​ ಮಾಡುವವರಿಗಾಗಿ ಈ ದೇಸಿ ಟ್ರಿಕ್​​ | Viral Video

Untitled design - 2025-03-12T194954.269
Published on

ಇತ್ತೀಚಿನ ದಿನಗಳಲ್ಲಿ ರೀಲ್ಸ್​​ ಮಾಡದೆ ಯಾವುದೇ ಹಬ್ಬವನ್ನು ಆಚರಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ದೀಪಾವಳಿಯಂದು ಜನರು ದೀಪಗಳು ಮತ್ತು ಪಟಾಕಿಗಳನ್ನು ಪ್ರಯೋಗಿಸುತ್ತಾ ರೀಲ್‌ಗಳನ್ನು ತಯಾರಿಸುತ್ತಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಹೋಳಿ ಹಬ್ಬದ ಪ್ರಯುಕ್ತ ವಿಡಿಯೋವೊಂದ ಜಾಲತಾಣದಲ್ಲಿ ವೈರಲ್(Viral Video)​ ಆಗುತ್ತಿದೆ.

ಹೋಳಿ ಹಬ್ಬ ಬಂದ ತಕ್ಷಣ ಬಣ್ಣದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಬಹುದು. ಆದರೆ ಅವುಗಳಲ್ಲಿ ಬಹಳ ಆಕರ್ಷಕವಾಗಿ ಕಾಣುವ ವಿಡಿಯೋ ತೀರಾ ವಿರಳ. ಇತ್ತೀಚೆಗೆ ಬಲೂನ್‌ಗಳ ಸಹಾಯದಿಂದ ಬಣ್ಣಗಳನ್ನು ಗಾಳಿಯಲ್ಲಿ ಹಾರಿಸುವ ಪ್ರವೃತ್ತಿ ಹೆಚ್ಚು ವೈರಲ್ ಆಗುತ್ತಿದೆ. ಅಂತಹದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್​ ವಿಡಿಯೋದಲ್ಲಿ ದಂಪತಿ ತಮ್ಮ ಕೈಯಲ್ಲಿ ಎರಡು ಬಲೂನ್ ಬಣ್ಣದ ಬಾಂಬ್‌ಗಳೊಂದಿಗೆ ಬಣ್ಣಗಳನ್ನು ಎರಚುವುದನ್ನು ಕಾಣಬಹುದು.

ಈ ದೇಸಿ ಟ್ರಿಕ್​ ಅನ್ನು ರೀಲ್ಸ್​ ಮಾಡುವವರು ಬಳಸಿಕೊಳ್ಳಬಹುದು. ಇದುವರೆಗೂ ಈ ವಿಡಿಯೋವನ್ನು 5 ಕೋಟಿ 51 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜನರು ಈ ಹ್ಯಾಕ್​​ ಅನ್ನು ಬಹಳ ಇಷ್ಟಪಡುತ್ತಿದ್ದಾರೆ. ಬಣ್ಣಗಳನ್ನು ಸ್ಫೋಟಿಸಲು ನೀವು ತುಂಬಾ ಒಳ್ಳೆಯ ತಂತ್ರವನ್ನು ಮಾಡಿದ್ದೀರಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಹೋಳಿ ಹಬ್ಬದಂದು ಟ್ರೆಂಡಿ ರೀಲ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ‘ಬಲೂನ್ ಕಲರ್ ಬಾಂಬ್' ತಯಾರಿಸುವುದನ್ನು ಕಲಿಯಿರಿ. ಇದನ್ನು ತಯಾರಿಸುವುದು ತುಂಬಾ ಸುಲಭ. ಮೊದಲು ಹತ್ತು ರೂಪಾಯಿ ಬೆಲೆಬಾಳುವ ಯಾವುದೇ ಕಂಪನಿಯ ನೀರಿನ ಬಾಟಲಿಯನ್ನು ತೆಗೆದುಕೊಂಡು ಅದರ ಮುಚ್ಚಳದ ಬದಿಯಿಂದ ಮೇಲ್ಭಾಗದವರೆಗೆ ಸ್ವಲ್ಪ ಕತ್ತರಿಸಿ ಬಲೂನ್ ಅನ್ನು ಗಾಳಿ ತುಂಬಿಸಿ ಬಾಟಲಿಯ ಮುಚ್ಚಳದ ಮೇಲೆ ಇರಿಸಿ. ಬಲೂನಿನಿಂದ ಗಾಳಿ ಹೊರಹೋಗದಂತೆ ತಡೆಯಲು, ಅದನ್ನು ಮುಚ್ಚಳದ ಮುಂದೆ ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ. ನಂತರ ಬಾಟಲಿಯ ಕತ್ತರಿಸಿದ ಭಾಗವನ್ನು ಮೇಲಿನಿಂದ ಬಣ್ಣದಿಂದ ತುಂಬಿಸಿ. ಕ್ಯಾಮೆರಾ ಆನ್ ಮಾಡಿ ಬಲೂನಿನಿಂದ ಗಾಳಿಯನ್ನು ಬಾಟಲ್ ಮುಚ್ಚಳಕ್ಕೆ ಪ್ರವೇಶಿಸಲು ಬಿಡಿ ನಂತರ ಬಣ್ಣವು ಪೂರ್ಣ ವೇಗದಲ್ಲಿ ಗಾಳಿಯಲ್ಲಿ ಹಾರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net