ಹಾವು ವಿಷಪೂರಿತವಾಗಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅದನ್ನು ಚಿಕ್ಕ ಮಗುವಿನೊಂದಿಗೆ ಸೋಫಾದ ಮೇಲೆ ಬಿಡುವುದರಿಂದ ಅಪಾಯ ತಪ್ಪಿದ್ದಲ್ಲ. ಕೇವಲ ಒಂದು ರೀಲ್ಸ್ ಮಾಡುವ ಉದ್ದೇಶದಿಂದ ಅಥವಾ ಹೆಚ್ಚಿನ ಮಂದಿ ಅದನ್ನು ವೀಕ್ಷಿಸಬೇಕು ಎಂಬ ಕಾರಣದಕ್ಕೆ ಇಂತಹ ಕೆಲಸ ಮಾಡಬಾರದು. ಹಾವಿನೊಂದಿಗೆ ಆಟ ಒಳ್ಳೆಯದಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ.
ಇದನ್ನು ಓದಿ: ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಹುಡುಗಿಯರ ಬೆನ್ನಟ್ಟಿದ ಶ್ವಾನ; ಮುಂದೇನಾಯ್ತು ನೀವೇ ನೋಡಿ | Viral Video
ವೈರಲ್ ವಿಡಿಯೋದಲ್ಲಿ ಮಗುವೊಂದು ಹಾವಿನೊಂದಿಗೆ ಆಟವಾಡುವುದನ್ನು ಕಾಣಬಹುದು. ಮಗು ಕುಳಿತಿರುವ ಜಾಗದಲ್ಲಿ ಹಾವನ್ನು ಬಿಡಲಾಗಿದೆ. ಮಗು ಹಾವಿನ ತಲೆಯನ್ನು ಹಿಡಿದು ಅದರ ಕಣ್ಣುಗಳನ್ನು ನೋಡುತ್ತದೆ. ಬಳಿಕ ಹಾವನ್ನು ಸೋಫಾಗೆ ಹೊಡೆಯುವ ಮಗು ಬಳಿಕ ಕಿರುಚಿತ್ತದೆ. ಸ್ವಲ್ಪ ಸಮಯದ ನಂತರ ಹಾವು ಅಲ್ಲಿಂದ ಹೋಗಲು ಪ್ರಯತ್ನಿಸುವಾಗ.ಮಗು ಹಾವನ್ನು ಕೆಳಗೆ ತಳ್ಳುವುದನ್ನು ನೋಡಬಹುದು. ಇಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಆದರೆ ಈ ವಿಡಿಯೋ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಈ ವಿಡಿಯೋವನ್ನು ಇದುವರೆಗೂ 1 ಕೋಟಿ 29 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮಕ್ಕಳಿಗೆ ಹಾನಿ ಮಾಡುವ ಯಾವುದನ್ನೂ ಮಾಡಬೇಡಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಿ, ಜೀವದ ಜತೆ ಆಟವಾಡಬೇಡಿ, ಹೀಗೆ ಮಾಡಬೇಡಿ ಹಾವು ಮಗುವನ್ನು ಕಚ್ಚಬಹುದು, ಹೆಚ್ಚು ಮಂದಿ ವೀಕ್ಷಿಸಲಿ ಎಂದು ಈ ರೀತಿ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಆಕ್ಟೋಪಸ್ ಕೆಣಕಿ ಪ್ರಾಣಕ್ಕೆ ಕುತ್ತು ತಂದುಕೊಂಡ ವ್ಯಕ್ತಿ; Viral Video ನೋಡಿ ನೆಟ್ಟಿಗರು ಗರಂ