More

    ಕದ್ದ ಕಾರನ್ನು 10 ಕಿ.ಮೀ ತಳ್ಳಿಕೊಂಡೇ ಸಾಗಿದ ಖದೀಮರು! ಮುಂದೇನಾಯ್ತು ಎಂಬುದೇ ಕುತೂಹಲ…

    ಕಾನ್ಪುರ: ಅದ್ಯಾವ ಕ್ಷಣದಲ್ಲಿ ಮೂವರು ಯುವಕರಿಗೆ ಕಾರು ಕದಿಯುವ ಎಂಬ ಆಲೋಚನೆ ಬಂದಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಿಲ್ಲಿಸಿದ್ದ ಕಾರೊಂದನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ತಮ್ಮ ಕೃತ್ಯ ಯಾರ ಗಮನಕ್ಕೂ ಬಾರದಿರಲಿ ಎಂದು ನಿರ್ಧರಿಸಿ ಸುಮಾರು 10 ಕಿ.ಮೀ ದೂರ ಕಾರನ್ನು ತಳ್ಳಿಕೊಂಡು ಮುಂದೆ ಸಾಗಿದ್ದಾರೆ. ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ಕಾರನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಇದು ಜಗತ್ತಿನ ದುಬಾರಿ ಬೆಲೆಯ ಮಾವು; ಕೆ.ಜಿ.ಗೆ 2.5 ಲಕ್ಷ ರೂಪಾಯಿ!

    ಮೂವರು ಕಳ್ಳರ ಕಥೆ ಸ್ವಾರಸ್ಯಕರವಾಗಿದ್ದು, ಕದ್ದ ಕಾರನ್ನು ತಳ್ಳಿಕೊಂಡು ಹೋಗಲು ಕಾರಣವೂ ಇದೆ. ಯೋಜನೆ ರೂಪಿಸಿಕೊಂಡಂತೆ ನಿಲ್ಲಿಸಿದ್ದ ಕಾರು ಕದ್ದಿದ್ದಾರೆ. ವಿಚಿತ್ರವೆಂದರೆ ಮೂವರು ಖದೀಮರಿಗೂ ಡ್ರೈವಿಂಗ್ ಮಾತ್ರ ಗೊತ್ತಿರಲಿಲ್ಲ. ಕೊನೆಗೆ ಕದ್ದಿರುವ ಕಾರನ್ನು ತಳ್ಳಿಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಮೈ ಬೆವರಲು ಶುರುವಾಗಿದ್ದು, ಸುಸ್ತಾದ ಕಳ್ಳರು, ನಂಬರ್ ಪ್ಲೇಟ್ ತೆಗೆದು ಕಾರನ್ನು ನಿರ್ಜನ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

    ಇದನ್ನೂ ಓದಿ: ತಾಳಿ ಕಟ್ಟದೆ ಓಡಿ ಹೋಗುತ್ತಿದ್ದ ವರನನ್ನು 20 ಕಿ.ಮೀ. ಬೆನ್ನಟ್ಟಿ ಮಂಟಪಕ್ಕೆ ಎಳೆದು ತಂದ ವಧು!

    ನಿರ್ಜನ ಪ್ರದೇಶದಲ್ಲಿ ಕಾರು ನಿಂತಿರುವ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಗಳವಾರ ಖದೀಮರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಟೆಕ್ ವಿದ್ಯಾರ್ಥಿ ಸತ್ಯಂ ಕುಮಾರ್, ಬಿ.ಕಾಂ ವಿದ್ಯಾರ್ಥಿ ಅಮನ್ ಗೌತಮ್ ಮತ್ತು ಉದ್ಯೋಗಿ ಅಮಿತ್ ವರ್ಮಾ ಬಂಧಿತರು. ಮೂವರು ಆರೋಪಿಗಳು ಮೇ 7 ರಂದು ದಬೌಲಿ ಪ್ರದೇಶದಿಂದ ಕಾರು ಕದ್ದಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ ಭೇಜ್ ನಾರಾಯಣ್ ಸಿಂಗ್ ಹೇಳಿದ್ದಾರೆ.

    ಮೂವರು ಕಾರು ಕದ್ದಿದ್ದು ಅವರಲ್ಲಿ ಯಾರಿಗೂ ಡ್ರೈವಿಂಗ್ ಗೊತ್ತಿರಲಿಲ್ಲ. ಹೀಗಾಗಿ ಕಾರನ್ನು ದಬೌಲಿಯಿಂದ ಕಲ್ಯಾಣಪುರಕ್ಕೆ 10 ಕಿ.ಮೀ ದೂರ ತಳ್ಳಿಕೊಂಡು ಹೋಗಿದ್ದಾರೆ. ಕದ್ದ ಕಾರನ್ನು ಆನ್​ಲೈನ್ ಮೂಲಕ ಮಾರಾಟ ಮಾಡಲು ನಿರ್ಧರಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಎಸಿಪಿ ಭೇಜ್ ನಾರಾಯಣ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts