More

    ವಿಭಿನ್ನ ವಿಶೇಷ ವಿನೋದ; ಇಬ್ಬರು ನಾಯಕಿಯರ ಖಡಕ್ ‘ಫೈಟರ್’

    ಬೆಂಗಳೂರು: ನೂತನ್ ಉಮೇಶ್ ಆ್ಯಕ್ಷನ್-ಕಟ್ ಹೇಳುತ್ತಿರುವ ವಿನೋದ್ ಪ್ರಭಾಕರ್, ಲೇಖಾಚಂದ್ರ ಹಾಗೂ ಪಾವನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ‘ಫೈಟರ್’ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ‘ಐ ವಾನ ಾಲೋ ಯು’ ಎಂಬ ಹಾಡು ಬಿಡುಗಡೆಯಾಗಿದ್ದು ಜಾಲತಾಣದಲ್ಲಿ ಸದ್ದು ಮಾಡಿದೆ.

    ಚಿತ್ರದ ಬಗ್ಗೆ ನಟ ವಿನೋದ್ ಪ್ರಭಾಕರ್, ‘ಫೈಟರ್’ ಎಂದರೆ ಹೊಡೆದಾಡುವವನು ಮಾತ್ರವಲ್ಲ, ತನ್ನ ಕುಟುಂಬಕ್ಕಾಗಿ ಅನ್ಯಾಯದ ವಿರುದ್ಧ ಹೋರಾಡುವವನು’ ಎಂದು ಹೇಳಿಕೊಂಡಿದ್ದರು. ಈಗ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳುವ ಅವರು, ‘ಇದು ಕೇವಲ ಹೊಡೆದಾಟದ ಸಿನಿಮಾ ಅಲ್ಲ. ತಂದೆ-ತಾಯಿ, ಮಗನ ಬಾಂಧವ್ಯದ ಜತೆಗೆ ಒಂದಿಷ್ಟು ಥ್ರಿಲ್ಲರ್ ಅಂಶಗಳನ್ನೂ ಒಳಗೊಂಡಿರುವ ್ಯಾಮಿಲಿ ಎಂಟರ್ಟೇನ್ಮೆಂಟ್ ಚಿತ್ರ. ರೈತರ ಸಂಕಷ್ಟಗಳ ಮೇಲೂ ಬೆಳಕು ಚೆಲ್ಲಲಾಗಿದೆ. ಇದರಲ್ಲಿರುವ ಆ್ಯಕ್ಷನ್ ಸನ್ನಿವೇಶಗಳು ಚಿತ್ರದ ಹೈಲೈಟ್ ಎನ್ನಬಹುದು. ಮುಖ್ಯವಾಗಿ ಚಿತ್ರದುರ್ಗದಲ್ಲಿ ನಡೆಯುವ ಫೈಟ್ ಪ್ರೇಕ್ಷಕರಿಗೆ ಥ್ರಿಲ್ ನೀಡಲಿದೆ’ ಎಂದು ಹೇಳಿಕೊಳ್ಳುತ್ತಾರೆ. ಇದರ ಜತೆಗೆ ವಿನೋದ್ ಹಿಪ್ಪಿ, ಶಾರ್ಟ್ ಹೇರ್‌ಕಟ್, ಗಡ್ಡಾದಾರಿಯಾಗಿ ಭಿನ್ನ-ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ನಿರೋಷಾ ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ಚಿತ್ರದಲ್ಲಿ ವಿನೋದ್ ಪ್ರಭಾಕರ್ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿನೋದ್‌ಗೆ ಇಬ್ಬರು ನಾಯಕಿಯರಿದ್ದು ಲೇಖಾಚಂದ್ರ ಮತ್ತು ಪಾವನಾ ನಟಿಸಿದ್ದಾರೆ.

    ಫೈಟರ್​ಗೆ ದರ್ಶನ್ ಸಾಥ್:
    ಫೈಟರ್’ ಚಿತ್ರಕ್ಕೆ ಸಪೋರ್ಟ್ ನೀಡಿರುವ ನಟ ದರ್ಶನ್ ಬಗ್ಗೆ ವಿನೋದ್, ‘ದರ್ಶನ್ ನನ್ನ ಮೊದಲ ಸಿನಿಮಾದಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ. ಅದೇ ರೀತಿ ಫೈಟರ್ ಚಿತ್ರಕ್ಕೂ ಮೊದಲ ಕ್ಲಾಪ್ ಮಾಡಿದ್ದರು, ಈಗ ವಿಡಿಯೋ ಮೂಲಕ ಹಾರೈಸಿದ್ದಾರೆ. ಅವರ ಸಪೋರ್ಟ್ ಇದ್ದರೆ ಏನು ಬೇಕಾದರು ಮಾಡಬಹುದು ಎನ್ನುವ ಉತ್ಸಾಹ ಇರುತ್ತದೆ’ ಎಂದು ಹೇಳಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts