More

    ಧೈರ್ಯದಿಂದ ಸಹೋದರಿ ಜಾಹ್ನವಿಗಿಂತ ಎರಡು ಹೆಜ್ಜೆ ಮುಂದೆ ಹೋದ ಖುಷಿ..ಅಭಿಮಾನಿಗಳ ಮನಗೆದ್ದ ಗ್ಲಾಮರಸ್​​ ಫೋಟೋ

    ಮುಂಬೈ: ಬಾಲಿವುಡ್​​​​​ ಚಿತ್ರರಂಗದಲ್ಲಿ ಒಬ್ಬರಿಗಿಂತ ಒಬ್ಬರು ಗ್ಲಾಮರಸ್ ನಟಿಯರಿದ್ದಾರೆ. ಸುಹಾನಾ ಖಾನ್, ಅನನ್ಯಾ ಪಾಂಡೆ ಅಥವಾ ಶನಯಾ ಕಪೂರ್ ಆಗಿರಲಿ ಹೀಗೆ ಸ್ಟಾರ್ ಕಿಡ್​​​ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಉದ್ಯಮದ ಪ್ರಸಿದ್ಧ ಸ್ಟಾರ್ ಮಕ್ಕಳ ಬಗ್ಗೆ ಮಾತನಾಡುವಾಗ, ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್ ಅವರನ್ನೂ ಮರೆಯಲು ಸಾಧ್ಯವಿಲ್ಲ.

    ಸ್ಟೈಲ್ ಮತ್ತು ಲುಕ್‌ನಲ್ಲಿ ಸುಂದರವಾಗಿರುವ ಖುಷಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಜಾಹ್ನವಿ ಕಪೂರ್ ಅವರ ಸಹೋದರಿಯಾಗಿರುವ ಖುಷಿ ಇನ್ನೂ ಚಿತ್ರರಂಗಕ್ಕೆ ಪ್ರವೇಶಿಸದಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳೊಂದಿಗೆ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

    ಧೈರ್ಯದಿಂದ ಸಹೋದರಿ ಜಾಹ್ನವಿಗಿಂತ ಎರಡು ಹೆಜ್ಜೆ ಮುಂದೆ ಹೋದ ಖುಷಿ..ಅಭಿಮಾನಿಗಳ ಮನಗೆದ್ದ ಗ್ಲಾಮರಸ್​​ ಫೋಟೋ

    ಜಾಹ್ನವಿ ಕಪೂರ್ ಅವರ ಸ್ಟೈಲ್ ಸ್ಟೇಟ್‌ಮೆಂಟ್ ಅನ್ನು ಎಲ್ಲರೂ ನೋಡಿದ್ದಾರೆ. ಆದರೆ ಖುಷಿ ಕಪೂರ್ ಅವರ ಅಕ್ಕನಿಗಿಂತ ಕಡಿಮೆಯಿಲ್ಲ. ಹೌದು, ಇತ್ತೀಚೆಗೆ ಅವರು ಮಿನಿ ಸ್ಕರ್ಟ್ ಮತ್ತು ಟಾಪ್‌ನಲ್ಲಿ ಸ್ಮಾರ್ಟ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸುಂದರವಾಗಿ ಕಾಣುವುದರ ಜೊತೆಗೆ ಖುಷಿ ಕ್ಲಾಸಿಯಾಗಿ ಕಾಣುತ್ತಿದ್ದಾರೆ. ನಟಿ ಈ ಲುಕ್​​​​ನಲ್ಲಿ ಬೂಟುಗಳನ್ನು ಧರಿಸಿರುವುದರ ಜೊತೆಗೆ ಓಪನ್ ಹೇರ್​​ನಲ್ಲಿ ಕಂಗೊಳಿಸುತ್ತಿದ್ದಾರೆ.

    ಖುಷಿ ಕಪೂರ್ ಅವರ ಇತ್ತೀಚಿನ ಫೋಟೋ ನೋಡಿ ಅಭಿಮಾನಿಗಳು ಕಳೆದುಹೋಗಿದ್ದಾರೆ. ಕೆಲವರು ಆಕೆಯನ್ನು ಸುಂದರಿ ಎಂದು ಹಾಡಿ ಹೊಗಳಿದ್ದಾರೆ. ಜಾಹ್ನವಿ ಕಪೂರ್ ಕೂಡ ತನ್ನ ಸಹೋದರಿಯ ಫೋಟೋ ನೋಡಿ ಸರ್​​ಪ್ರೈಸ್ ಆಗಿದ್ದು, “ಪ್ರಿನ್ಸೆಸ್ ಕ್ವೀನ್ ಫೇರಿ, ಮೈ ಲಾಡು, ಮೈ ಜಿಂಗ್ರಿ, ಮೈ ಮೈಸೂರ್ ಪಾಕ್, ಮೈ ಬಂಗಾರಮ್” ಎಂದು ಕಾಮೆಂಟ್ ಮಾಡಿದ್ದಾರೆ. ವೀರ್ ಪಹಾಡಿಯಾ ಕೂಡ ಈ ಫೋಟೋಗಳಿಗೆ ಹ್ಯಾಂಡ್ ಇಮೋಜಿ ಕಳುಹಿಸುವ ಮೂಲಕ ಖುಷಿಯನ್ನು ಹೊಗಳಿದ್ದಾರೆ.

    ಖುಷಿ ಕಪೂರ್ ಜೋಯಾ ಅಖ್ತರ್ ಅವರ ‘ದಿ ಆರ್ಚೀಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ಅನೇಕ ಸ್ಟಾರ್ ಮಕ್ಕಳು ನಟಿಸಲಿದ್ದಾರೆ. ಆದ್ದರಿಂದ, ಖುಷಿ ಕಪೂರ್ ಮಾತ್ರವಲ್ಲದೆ ಸುಹಾನಾ ಖಾನ್, ಅಗಸ್ತ್ಯ ನಂದಾ ಸೇರಿದಂತೆ ಅನೇಕ ಸ್ಟಾರ್ ಕಿಡ್ಸ್ ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ಚಿತ್ರವು ಥಿಯೇಟರ್ ಬದಲಿಗೆ ನೇರವಾಗಿ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

    ‘ಪ್ರೀತಿಯಲ್ಲಿ ಮೋಸವಾದಾಗ ಐಎಎಸ್ ಆಗಬೇಕೆಂದು ನಿರ್ಧರಿಸಿದೆ…’ ಇದು UPSCಯಲ್ಲಿ 94 ನೇ ರ‍್ಯಾಂಕ್ ಪಡೆದ ಅಭಿಷೇಕ್ ಸಿಂಗ್ ಯಶೋಗಾಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts