More

    ಲಂಕಾಸುರ ಮೂಲಕ ನಿರ್ಮಾಣಕ್ಕೆ ವಿನೋದ್; ಟೈಗರ್ ಟಾಕೀಸ್ ಬ್ಯಾನರ್​ನಲ್ಲಿ ಆರಂಭ

    ಬೆಂಗಳೂರು: ಕನ್ನಡದಲ್ಲಿ ಹಲವು ನಟರು ನಟನೆ ಜತೆಗೆ ಸಿನಿಮಾ ನಿರ್ಮಾಣದಲ್ಲಿಯೂ ಸಕ್ರಿಯರಾಗಿದ್ದಾರೆ. ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ನಟ ವಿನೋದ್ ಪ್ರಭಾಕರ್. ಟೈಗರ್ ಟಾಕೀಸ್ ಬ್ಯಾನರ್ ಮೂಲಕ ಚೊಚ್ಚಲ ಚಿತ್ರವಾಗಿ ‘ಲಂಕಾಸುರ’ ಚಿತ್ರವನ್ನು ಕೈಗೆತ್ತಿಕೊಂಡಿರುವ ವಿನೋದ್, ನಾಯಕನಾಗಿಯೂ ನಟಿಸುತ್ತಿದ್ದಾರೆ.

    ಪ್ರಮೋದ್ ಕುಮಾರ್ ಡಿ.ಎಸ್. ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಜತೆಗೆ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಹಿರಿಯ ನಟ ದೇವರಾಜ್, ರವಿಶಂಕರ್ ಸಹ ತಾರಾಗಣದಲ್ಲಿದ್ದಾರೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸುಜ್ಞಾನ್ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ. ವಿಜೇತ್ ಕೃಷ್ಣ ಸಂಗೀತ, ಭರ್ಜರಿ ಚೇತನ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

    ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’; ‘ಅಯ್ಯೋ ನನ್ನ ದೇವರೇ..’ ಅಂದ್ರು ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts