More

    ಹಿಸ್ಟರಿ ರಿಪೀಟ್ಸ್​.. ಇದು ಚರಿತ್ರೆ ಸೃಷ್ಟಿಸೋ ಅವತಾರ: ಭಕ್ತರ ಆವೇಶಕ್ಕೆ ಪೊಲೀಸರ ಸರ್ಪಗಾವಲೂ ತತ್ತರ..

    ಬಾಗಲಕೋಟೆ: ಇತಿಹಾಸ ಮರುಕಳಿಸುತ್ತದೆ ಎಂಬುದನ್ನು ಕೊನೆಗೂ ಭಕ್ತರು ಸಾಬೀತುಪಡಿಸಿದ್ದಾರೆ. ಇತಿಹಾಸದಲ್ಲಿ ಎಂದೂ ರದ್ದಾಗದ ರಥೋತ್ಸವವನ್ನು ಈ ಸಲವೂ ನಡೆಸುವ ಮೂಲಕ ಇದು ಚರಿತ್ರೆ ಸೃಷ್ಟಿಸೋ ಅವತಾರ ಎಂದು ಸಾರಿದ್ದಾರೆ.

    ತಡೆಯಲು ನಿಂತ ಪೊಲೀಸರು ಕೊನೆಗೂ ಸಾಲು ಸಾಲು ಎತ್ತಿನ ಬಂಡಿಗೆ, ಸಹಸ್ರಾರು ಭಕ್ತರ ದಂಡಿಗೆ ದಂಗಾಗಿ ಪಕ್ಕಕ್ಕೆ ಸರಿದು ದಾರಿ ಬಿಟ್ಟಿದ್ದಾರೆ. ಪೊಲೀಸರ ಸರ್ಪಗಾವಲನ್ನೂ ದಾಟಿ ನುಗ್ಗಿದ ಭಕ್ತರು ಕೊನೆಗೂ ತೇರನ್ನು ಎಳೆದಿದ್ದಾರೆ.

    ಹೌದು.. ಕರೊನಾತಂಕ, ಕೋವಿಡ್ ನಿರ್ಬಂಧದ ನಡುವೆಯೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ರಥೋತ್ಸವ ಭರ್ಜರಿಯಾಗಿ ನೆರವೇರಿದೆ. ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಥೋತ್ಸವವನ್ನು ರದ್ದುಗೊಳಿಸಿದ್ದರೂ ಸಾವಿರಾರು ಭಕ್ತರು ಜಮಾಯಿಸಿ ತೇರನ್ನು ಎಳೆದೇ ಬಿಟ್ಟಿದ್ದಾರೆ.

    ಇದನ್ನೂ ಓದಿ: ಹೆಂಡತಿಯ ಕಣ್ಮುಂದೇ ಸಾವಿಗೀಡಾದ ಗಂಡ; ಈಗ ಪತ್ನಿಯ ಸ್ಥಿತಿಯೂ ಗಂಭೀರ…

    ಭಕ್ತರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸರ ಮನವಿಗೂ ಸ್ಪಂದಿಸದ ಭಕ್ತರು ರಥೋತ್ಸವ ಸ್ಥಳದತ್ತ ನುಗ್ಗಿದ್ದಾರೆ. ಭಕ್ತಸಮೂಹದ ಜಯಘೋಷಗಳ ಮಧ್ಯೆ ಬನಶಂಕರಿ ತಾಯಿಯ ರಥೋತ್ಸವ ನೆರವೇರಿದೆ. ಈ ಮೂಲಕ ದೇವಿಯ ಮೇಲಿರುವ ಭಕ್ತರ ನಂಬಿಕೆ ಮತ್ತೊಮ್ಮೆ ಬಲವಾಗಿದೆ. ಬನಶಂಕರಿ ದೇವಸ್ಥಾನದ ಆವರಣದಲ್ಲಿ ರಥೋತ್ಸವ ನಡೆಯುತ್ತಿದ್ದಂತೆ ಭಕ್ತರ ಸಂಭ್ರಮ ಮುಗಿಲು ಮುಟ್ಟುವಂತಿತ್ತು.

    ಇತಿಹಾಸದಲ್ಲಿ ಎಂದೂ ರದ್ದಾಗದ ರಥೋತ್ಸವ, ಇಂದು ನಡೆಯುತ್ತಾ?! ಕೆರಳಿದೆ ಭಾರಿ ಕುತೂಹಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts