ಸಾಲ ಪಡೆದವರು ಹಣದ ಜತೆ ಮಾನ ಕೂಡ ಕಳೆದರು ಅಂತ ಮಕ್ಕಳಿಬ್ಬರ ಜತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

Woman Loan
Published on

ಶಿವಮೊಗ್ಗ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂಬ ಮಾತಿದೆ. ಆದರೆ ಇದು ಸಾಲ ಕೊಟ್ಟು ಪ್ರಾಣ ಕಳೆದುಕೊಳ್ಳಬೇಡಿ ಎಂಬಂಥ ಪ್ರಕರಣ. ಏಕೆಂದರೆ ಇಲ್ಲೊಬ್ಬರು ಮಹಿಳೆ ಸಾಲ ಕೊಟ್ಟ ತಪ್ಪಿಗೆ ಮಕ್ಕಳಿಬ್ಬರ ಜತೆ ಆತ್ಮಹತ್ಯೆ ಮಾಡಿಕೊಂಡ ದುರಂತವೊಂದು ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಯಡೇಹಳ್ಳಿ ಗ್ರಾಮದ ವೀಣಾ ಹಾಗೂ ಆಕೆಯ ಇಬ್ಬರು ಹೆಣ್ಣು ಮಕ್ಕಳು ಸಾವಿಗೀಡಾದವರು. ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದ ಸಂತೋಷ ಹಾಗೂ ಆಶಾ ದಂಪತಿಗೆ ವೀಣಾ 8 ಲಕ್ಷ ರೂಪಾಯಿ ಸಾಲ ನೀಡಿದ್ದರು.

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸಂತೋಷ್-ಆಶಾ ದಂಪತಿ ವೀಣಾ ಬಗ್ಗೆಯೇ ಅಪಪ್ರಚಾರ ಮಾಡಲಾರಂಭಿಸಿದ್ದರು. ವೀಣಾಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂದೂ ಈ ದಂಪತಿ ಹೇಳಿದ್ದರು. ಇದರಿಂದ ಮನನೊಂದ ವೀಣಾ ತನ್ನ ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೀಣಾ ಮೃತದೇಹ ಹೊನ್ನಾಳಿ ತಾಲೂಕು ಯಕ್ಕನಹಳ್ಳಿ ಬಳಿ ಪತ್ತೆಯಾಗಿದೆ. ಆಕೆಯ ಒಂದು ಪುತ್ರಿಯ ಮೃತದೇಹ ಚನ್ನಗಿರಿ ತಾಲೂಕಿ ನಲ್ಲೂರು ಬಳಿ ಪತ್ತೆಯಾಗಿದೆ. ಇನ್ನೊಂದು ಪುತ್ರಿಗಾಗಿ ಹುಡುಕಾಟ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net