ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

Murder
ಶವ ಪತ್ತೆಯಾದ ಸ್ಥಳದಲ್ಲಿ ಜಮಾಯಿಸಿದ ಜನರು.
Published on

ರಾಯಚೂರು: ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನನ್ನು ಕೊಲೆ ಮಾಡಿ ಶವವನ್ನು ಎಸೆದುಹೋಗಿರುವ ಪ್ರಕರಣವೊಂದು ನಡೆದಿದೆ. ಕೊಲೆಗೀಡಾದ ವ್ಯಕ್ತಿ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ.

ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ನಿವಾಸಿ ಭೀಮಣ್ಣ (37) ಹತ್ಯೆಯಾದ ವ್ಯಕ್ತಿ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಈತ ದೇವದುರ್ಗ ತಾಲ್ಲೂಕು ಪಂಚಾಯತ್​ ಉಪಾಧ್ಯಕ್ಷ ಶಿವರಾಜ್ ಸಹೋದರ.

ಭೀಮಣ್ಣ ಗಲಗ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ಬೆಂಗಳೂರಿಗೆ ಹೋಗಿ ನೆಲೆಸಿದ್ದ. ಆದರೆ ಇತ್ತೀಚೆಗೆ ಇಬ್ಬರೂ ಸ್ವಗ್ರಾಮಕ್ಕೆ ಮರಳಿದ್ದು, ಆ ಬಳಿಕ ಈ ಕೊಲೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net