More

    ಇತಿಹಾಸದಲ್ಲಿ ಎಂದೂ ರದ್ದಾಗದ ರಥೋತ್ಸವ, ಇಂದು ನಡೆಯುತ್ತಾ?! ಕೆರಳಿದೆ ಭಾರಿ ಕುತೂಹಲ..

    ಬಾಗಲಕೋಟೆ: ಈ ದೇವಸ್ಥಾನದಲ್ಲಿನ ರಥೋತ್ಸವ ಇತಿಹಾಸದಲ್ಲಿ ಎಂದೂ ರದ್ದಾದ ಉದಾಹರಣೆಯೇ ಇಲ್ಲ. ಆದರೆ ಇಂದು ರಥೋತ್ಸವ ನಡೆಯುತ್ತದೆಯೇ ಇಲ್ಲವೇ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಏಕೆಂದರೆ ಭಕ್ತರು ರಥೋತ್ಸವ ನೆರವೇರಿಸಲು ಕಂಕಣ ತೊಟ್ಟಿದ್ದರೆ, ಅತ್ತ ಪೊಲೀಸರು ಉತ್ಸವ ತಡೆಯಲು ರಣೋತ್ಸಾಹದಿಂದ ಕಾಯುತ್ತಿದ್ದಾರೆ.

    ಹೌದು.. ಇಂಥದ್ದೊಂದು ಸನ್ನಿವೇಶ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಸೃಷ್ಟಿಯಾಗಿದೆ. ಇಲ್ಲಿನ ಐತಿಹಾಸಿಕ ಬನಶಂಕರಿ ದೇವಸ್ಥಾನದ ರಥೋತ್ಸವ ಇಂದು ಸಂಜೆ 5 ಗಂಟೆಗೆ ನಡೆಯಬೇಕಿದೆ. ಆದರೆ ರಥೋತ್ಸವ ಜಾಗದ ಎಲ್ಲ ರಸ್ತೆಗಳಲ್ಲೂ ಪೊಲೀಸರು ಸರ್ಪಗಾವಲು ಹಾಕಲಾಗಿದೆ.

    ಈ ಸಲ ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಲ್ಲಿನ ರಥೋತ್ಸವ ರದ್ದು ಮಾಡಿದೆ. ಆದರೆ ಇಲ್ಲಿನ ರಥೋತ್ಸವ ಎಂದೂ ರದ್ದಾದ ಉದಾಹರಣೆಯೇ ಇಲ್ಲ. ಇಲ್ಲಿನ ರಥ ಎಳೆಯುವ ಹಗ್ಗ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿಯಿಂದ ಬರಬೇಕಿದ್ದು, ತೇರನ್ನು ಎಳೆಯಲು ಸಾವಿರಾರು ಭಕ್ತರು ಅಲ್ಲಲ್ಲಿ ಚದುರಿ ನಿಂತಿದ್ದಾರೆ.

    ಮತ್ತೊಂದೆಡೆ ರಥೋತ್ಸವ ಜಾಗಕ್ಕೆ ಸರ್ಪಗಾವಲು ಹಾಕಿರುವ ಪೊಲೀಸರು, ನಾಕಾಬಂದಿ ಹಾಕಿದ್ದಾರೆ. ರಥೋತ್ಸವ ಜಾಗಕ್ಕೆ ಬರುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿ ಜನರನ್ನು ಚದುರಿಸುತ್ತಿದ್ದಾರೆ. ಅದಾಗ್ಯೂ ಭಕ್ತರು ದೊಡ್ಡ ಪ್ರಮಾಣದಲ್ಲಿ ಅಲ್ಲಲ್ಲಿ ಜಮಾಯಿಸಿದ್ದು, ಐದು ಗಂಟೆಗೆ ಏನಾಗಲಿದೆ ಎಂಬ ಭಾರಿ ಕುತೂಹಲ ಉಂಟಾಗಿದೆ.

    ಕೊನೆಯ ಕ್ಷಣದಲ್ಲಿ ಬ್ಯಾರಿಕೇಡ್ ತೆರೆದು ಭಕ್ತರು ರಥೋತ್ಸವ ಜಾಗಕ್ಕೆ ನುಗ್ಗಿದ್ದಾರೆ. ಮಾಡಲಗೇರಿ ಗ್ರಾಮದ ಎತ್ತಿನ ಬಂಡಿಗಳು ಕೂಡ ದೇವಸ್ಥಾನದ ಕಡೆಗೆ ಹೊರಟಿವೆ. ಅಪಾರ ಸಂಖ್ಯೆಯಲ್ಲಿ ಇರುವ ಭಕ್ತರನ್ನು ತಡೆಯಲು ಸಾಧ್ಯ ಇರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತೇರು ಎಳೆಯಲು ಸಾವಿರಾರು ಭಕ್ತರು ಆಗಮಿಸಿದ್ದು, ಏನೇ ಆದರೂ ಐದು ಗಂಟೆಗೆ ರಥೋತ್ಸವ ನಡೆದೇ ನಡೆಯುತ್ತದೆ ಎಂಬ ವಾತಾವರಣ ಸೃಷ್ಟಿಯಾಗಿದೆ.

    ಸಾಲ ಪಡೆದವರು ಹಣದ ಜತೆ ಮಾನ ಕೂಡ ಕಳೆದರು ಅಂತ ಮಕ್ಕಳಿಬ್ಬರ ಜತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

    10 ಜೀವಂತ ಗುಂಡುಗಳ ಸಮೇತ ಗನ್​ಮ್ಯಾನ್​ ಪಿಸ್ತೂಲ್ ಕಳವು; ನ್ಯಾಯಾಧೀಶರ ಭದ್ರತಾ ಸಿಬ್ಬಂದಿಯಿಂದ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts