ವಿನೋದ್ ಪ್ರಭಾಕರ್-ಸೌಂದರ್ಯ ಜಯಮಾಲಾ ಅಪರೂಪದ ಭೇಟಿ; ಎಲ್ಲಿ-ಏನು? ಇಲ್ಲಿದೆ ವಿವರ..

Vinod Prabhakar
Published on

ಬೆಂಗಳೂರು: ನಟ ವಿನೋದ್ ಪ್ರಭಾಕರ್ ಹಾಗೂ ನಟಿ ಸೌಂದರ್ಯ ಜಯಮಾಲಾ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳದೆ ಕಾರಣಾಂತರಗಳಿಂದ ದೂರವಿದ್ದ ಬಗ್ಗೆ ವಿನಾಕಾರಣ ಅಂತೆ-ಕಂತೆಗಳು ಹಬ್ಬಿದ್ದವು. ಆದರೆ ಅವೆಲ್ಲಕ್ಕೂ ಉತ್ತರ ಎಂಬಂತೆ ಇಬ್ಬರೂ ಜೊತೆಗೇ ಕಾಣಿಸಿಕೊಂಡಿದ್ದಾರೆ.

ಒಟ್ಟಿಗೆ ಆಡುತ್ತ ಬೆಳೆದ ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದರೂ ಇದೀಗ ಕಾಲವೇ ಅವರನ್ನು ಮತ್ತೆ ಜೊತೆಗೂಡಿಸಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​ನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆದ ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷತೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ.

ಬಹಳ ವರ್ಷಗಳ ಬಳಿಕ ಪರಸ್ಪರ ನೋಡಿ ಇಬ್ಬರೂ ಖುಷಿಯಾಗಿದ್ದು, ಒಂದಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರೂ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ-ತಂಗಿಯ ಬಾಂಧವ್ಯ ಚೆನ್ನಾಗಿದೆ. ಇಬ್ಬರೂ ದೂರವಾಗಿದ್ದರೆ, ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂಥ ಗಾಂಧಿನಗರದ ಗಾಸಿಪ್​ಗಳಿಗೆ ಇವರು ಜೊತೆಯಾಗಿ ಕಾಣಿಸಿಕೊಂಡು ಅವೆಲ್ಲ ಸುಳ್ಳು ಎಂಬ ಸಂದೇಶ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net