ನೋವುನಿವಾರಕದ ಡಬ್ಬಿ​ ನುಂಗಿ 9 ತಿಂಗಳ ಮಗು ಸಾವು; ಮದ್ವೆಯಾಗಿ 10 ವರ್ಷದ ಬಳಿಕ ಜನಿಸಿದ್ದ ಪುತ್ರಿ!

Priyadarshini
Published on

ಬಳ್ಳಾರಿ: ಈ ದಂಪತಿಯ ಸಂತೋಷವೆಲ್ಲ ಒಂದು ಸಣ್ಣ ಮೆಂಥೋಪ್ಲಸ್ ಡಬ್ಬಿ ನುಂಗಿ ಹಾಕಿದೆ. ಅರ್ಥಾತ್​, ಮದುವೆಯಾಗಿ ಹತ್ತು ವರ್ಷಗಳ ಬಳಿಕ ಜನಿಸಿದ್ದ 9 ವರ್ಷದ ಪುತ್ರಿ, ಮೆಂಥೋಪ್ಲಸ್ ಬಾಮ್​ನ ಚಿಕ್ಕ ಡಬ್ಬಿಯನ್ನು ನುಂಗಿ ಸಾವಿಗೀಡಾಗಿದ್ದಾಳೆ.

ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಐನೇ ವಾರ್ಡ್ ಇಂದಿರಾನಗರದಲ್ಲಿ ಈ ದುರಂತ ಸಂಭವಿಸಿದೆ. ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಯ ಏಕೈಕ ಪುತ್ರಿ, 9 ವರ್ಷದ ಪ್ರಿಯದರ್ಶಿನಿ ಮೆಂಥೋಪ್ಲಸ್ ಬಾಮ್​ನ ಸಣ್ಣ ಡಬ್ಬಿಯನ್ನು ನುಂಗಿ ಮೃತಪಟ್ಟಿದ್ದಾಳೆ.

ಆಟವಾಡುತ್ತಿದ್ದಾಗ ಮೆಂಥೋಪ್ಲಸ್ ಚಿಕ್ಕ ಡಬ್ಬಿಯನ್ನು ನುಂಗಿದ ಮಗು, ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿತ್ತು. ಮಗುವನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಲಾಯಿತಾದರೂ, ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net