ಮಾಸ್ ಲುಕ್ ನಲ್ಲಿ ವಿನಯ್ ರಾಜ್ ಕುಮಾರ್! 'ಪೆಪೆ' ಚಿತ್ರದ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ...

Published on
ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ 'ಸಿದ್ಧಾರ್ಥ', 'ರನ್ ಆಂಟನಿ' ಎಂಬ ಸಿನಿಮಾಗಳ ಮೂಲಕ ಬೆಳ್ಳಿ ತೆರೆಯ ಮೇಲೆ ಬಹಳಷ್ಟು ಮಿಂಚಿದ್ದು, ಈಗ 'ಪೆಪೆ' ಎಂಬ ಹೊಸ ಸಿನಿಮಾ ಮೂಲಕ ಮತ್ತೆ ಸಿನಿಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. 'ಪೆಪೆ' ಚಿತ್ರದ ಟೀಸರ್ ಇದೀಗ ರಿಲೀಸ್ ಆಗಿದ್ದು, ಯೂಟ್ಯೂಬ್​ನಲ್ಲಿ ಒಳ್ಳೆಯ ಪ್ರತಿಕ್ರಿಯ ಪಡೆಯುತ್ತಿದೆ. ನಟ ವಿನಯ್ ಈ ಸಿನಿಮಾದಲ್ಲಿ ತಮ್ಮ ಹಿಂದಿನ ಲವರ್ ಬಾಯ್ ಇಮೇಜ್ ನಿಂದ ಹೊರ ಬಂದು, ಮಾಸ್ ಮತ್ತು ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೆಲವು ಪಂಚಿಂಗ್ ಡೈಲಾಗ್​​​​ಗಳು 'ಪೆಪೆ' ಟೀಸರ್​ನಲ್ಲಿ ಸದ್ಯ ಎಲ್ಲರ ಗಮನ ಸೆಳೆಯುತ್ತಿವೆ. ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಎಂಬಂತೆ ಹಲವು ನಟರು ಪ್ರಮುಖ ಪಾತ್ರಗಳಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ. 'ಪೆಪೆ' ಸಿನಿಮಾಗೆ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದು, ಉದಯಶಂಕರ ಎಸ್ ಅವರು ನಿರ್ಮಾಪಕರಾಗಿದ್ದಾರೆ. ಜತೆಗೆ, ಸಮರ್ಥ ಉಪಾದ್ಯ ಅವರು ಕ್ಯಾಮೆರಾ ಹಿಡಿದ್ದು, ಮನು ಶೇಡ್ಗಾರ್ ಅವರ ಸಂಕಲನ ಈ ಚಿತ್ರಕ್ಕೆ ಇದೆ. ಈಗಾಗಲೇ ಟೀಸರ್​ಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net