More

    ಗೂಗಲ್ ನಕ್ಷೆಯಲ್ಲಿ ಎಲ್ಲೆಲ್ಲೂ ಅಪ್ಪು ಹೆಸರಿನದ್ದೇ ಹವಾ! ‘ಪುನೀತ್​ ರಾಜ್​ಕುಮಾರ್ ರಸ್ತೆ’ ನಾಮಕರಣಕ್ಕೆ ಬಿಬಿಎಂಪಿ ಗ್ರೀನ್ ಸಿಗ್ನಲ್..

    ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ನಟ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡುವ ರಸ್ತೆಯ ನಾಮಕರಣಕ್ಕೆ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಬರೋಬ್ಬರಿ 12 ಕಿ.ಮೀ. ಉದ್ದದ ಬೆಂಗಳೂರಿನ ವರ್ತುಲ ರಸ್ತೆಗೆ ‘ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ಹೆಸರಿಡಲು ತೆಗೆದುಕೊಂಡ ನಿರ್ಣಯಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ. ಅಂದಹಾಗೆ, ಮೈಸೂರು ರಸ್ತೆಯ ನಾಯಂಡನ ಹಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟದ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ ಅಪ್ಪು ಅವರ ಹೆಸರನ್ನು ಇಡುವ ಯೋಚನೆ ಇದೆ. ಹಾಗಾಗಿ, ಬೆಂಗಳೂರಿನ ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಈ ವಿಚಾರವ ಕುರಿತು ಇತ್ತೀಚೆಗೆ ಒಂದು ಮನವಿ ಮಾಡಲಾಗಿತ್ತು. ಇನ್ನು, 12 ಕಿ.ಮೀ. ಉದ್ದದ ನಟ ಪುನೀತ್ ರಾಜ್​ಕುಮಾರ್ ಅವರ ರಸ್ತೆ ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್, ಸಾರಕ್ಕಿ ಸಿಗ್ನಲ್ ಮತ್ತು ಜೆ.ಪಿ.ನಗರವನ್ನು ಸಂಪರ್ಕಿಸಲಿದೆ ಎಂಬ ಮಾಹಿತಿ ಇದೆ.
    ಇಲ್ಲಿ ಗಮನಾರ್ಹ ವಿಷಯವೆಂದರೆ, ಗೊರಗುಂಟೆ ಪಾಳ್ಯದಿಂದ ಅಂದರೆ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗಳು ಇರುವ ರಸ್ತೆ, ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರ ಏಪ್ರಿಲ್ 08 ರಂದು ಡಾ.ರಾಜ್ ಕುಮಾರ್ ಪುಣ್ಯಭೂಮಿ ರಸ್ತೆಎಂದು ಇಡಲು ಬಿಬಿಎಂಪಿ ಸಭೆಯಲ್ಲಿ ನಿರ್ಣಯ ಕೈಗೊಂಡು ಅಧಿಕೃತವಾಗಿ ರಸ್ತೆಯ ನಾಮಕರಣ ಸಮಾರಂಭವನ್ನು ಮಾಡಲಾಗಿತ್ತು. ಇನ್ನು, ಇದರ ಮುಂದುವರೆದ ಭಾಗವಾಗಿಯೇ ನಾಯಂಡ ಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವರೆಗಿನ ವರ್ತುಲ ರಸ್ತೆಗೆ ಪುನೀತ್ ರಾಜ್‌ಕುಮಾರ್ ರಸ್ತೆಎಂದು ನಾಮಕರಣ ಮಾಡಲಾಗುತ್ತಿದೆ. ಆದಷ್ಟು ಶೀಘ್ರವಾಗಿ ರಾಜ್ಯದ ಮುಖ್ಯಮಂತ್ರಿಗಳಿಂದ ಪುನೀತ್ ರಾಜ್‌ಕುಮಾರ್ ರಸ್ತೆಯ ನಾಮಕರಣ ಸಮಾರಂಭವನ್ನು ದೊಡ್ಮನೆಯ ಸದಸ್ಯರ ಸಮ್ಮುಖದಲ್ಲಿ ಏರ್ಪಡಿಸಲಾಗುವುದು ಎಂದು ಬಿಬಿಎಂಪಿ ಸದಸ್ಯ ರಮೇಶ್ ಅವರು ತಿಳಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಹೆಸರನ್ನು ರಸ್ತೆಗೆ ನಾಮಕರಣ ಮಾಡುಲು ಬಿಬಿಎಂಪಿ ಡಿಸೆಂಬಲ್​ನಲ್ಲಿ ಒಂದು ಪತ್ರಿಕಾ ಪ್ರಕಟಣೆ ಮಾಡಿ, ಆಕ್ಷೇಪಣೆಗಳಿದ್ದಲ್ಲಿ 30 ದಿನಗಳ ಒಳಗೆ ತಿಳಿಸಬೇಕೆಂದು ವಿನಂತಿಸಿತು.
    ಬಳಿಕ, ಈಗ ರಸ್ತೆಗೆ ‘ಶ್ರೀ.ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಬಹುದು ಎಂದು ಈ ರಸ್ತೆಯ ಸಮೀಪದ ಬಡಾವಣೆಗಳಿಗೆ ಸೇರಿರುವ 8 ಸಂಘಸಂಸ್ಥೆಗಳ 700ಕ್ಕೂ ಹೆಚ್ಚು ಜನ ಒಪ್ಪಿಗೆ ಸೂಚಿಸಿದ್ದು, ಸಹಿ ಕೂಡಾ ಹಾಕಿದ್ದಾರೆ. ಆದರೆ, ಈ ರಸ್ತೆಗೆ ಅಪ್ಪು ಹೆಸರಿಡಲು ನಟ ಅಂಬರೀಷ್ ಅಭಿಮಾನಿಗಳು ಮಾತ್ರ ಆಕ್ಷೇಪ ಸಲ್ಲಿಸಿ ಬಹಳಷ್ಟು ಚರ್ಚೆಗೆ ಕಾರಣರಾದರು. ಆದರೆ, ಬಿಬಿಎಂಪಿ ಈಗ ರಸ್ತೆಗೆ ‘ಪುನೀತ್ ರಾಜ್​ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ. ಬಿಬಿಎಂಪಿ ಈಗ ಪುನೀತ್ ಹೆಸರನ್ನು ರಸ್ತೆಗೆ ಇಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದೀಗ ಎಲ್ಲರೂ ಇದನ್ನು ಸ್ವಾಗತಿಸಲಿದ್ದಾರೆ ಎಂಬ ಆಶಯ ಅಪ್ಪು ಅಭಿಮಾನಿಗಳದ್ದಾಗಿದೆ. ಈಗಾಗಲೇ ರಾಜ್ಯದ ಹಲವು ಪಟ್ಟಣ, ನಗರ, ಗ್ರಾಮಗಳಲ್ಲಿ ರಸ್ತೆಗಳಿಗೆ, ವೃತ್ತಗಳಿಗೆ ಅಪ್ಪು ಅವರ ಹೆಸರು ಇಡಲಾಗಿದೆ. ಪುನೀತ್ ರಾಜ್‌ಕುಮಾರ್ ಪುತ್ಥಳಿಗಳನ್ನು ಬೀದಿಗಳಲ್ಲಿ ಇರಿಸಲಾಗಿದೆ. ಈಗ, ಬಿಬಿಎಂಪಿಯ ಈ ನಿರ್ಧಾರದಿಂದ ಗೂಗಲ್ ನಕ್ಷೆಯಲ್ಲಿ ಎಲ್ಲೆಲ್ಲೂ ಅಪ್ಪು ಹೆಸರಿನದ್ದೇ ಹವಾ ಎಂದು ಹೇಳಬೇಕು.

    ಕನ್ನಡದ ಮೊದಲ ವರ್ಚುವಲ್ ಸಿನಿಮಾ ‘ಮೇಡ್ ಇನ್ ಚೈನಾ’ ಟೀಸರ್ ಔಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts