

ಕೋಟ: ಕಳೆದರಡು ದಿನಗಳಿಂದ ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲ್ಕುದ್ರು ಭಾಗದಲ್ಲಿ ಉಪ್ಪು ನೀರಿನ ಕೃತಕ ನೆರೆ ಹಾವಳಿಯಿದ್ದು, ಈ ಭಾಗಕ್ಕೆ ಪಾಂಡೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ ಹಾಗೂ ಪಿಡಿಒ ಲೋಲಾಕ್ಷಿ, ಸದಸ್ಯ ಸಿಲ್ವರ್ ಸ್ಟಾರ್ ಡಿಸೋಜ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ವೈ.ಬಿ.ರಾಘವೇಂದ್ರ ಮಾತನಾಡಿ, ಉಪ್ಪು ನೀರಿನಿಂದ ಗ್ರಾಮಗಳಿಗಾಗುವ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಹೊಳೆ ಸಾಲುಗಳಿಗೆ ತಡೆ ದಂಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಜತೆಗೆ ಸಂಬಂಧಿಸಿದ ಸಚಿವರಿಗೂ ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಉಪ್ಪು ನೀರಿನ ಕೃತಕ ನೆರೆ ಕುರಿತು ವಿಜಯವಾಣಿ ಮಂಗಳವಾರ ವಿಸ್ತೃತ ವರದಿ ಪ್ರಕಟಿಸಿತ್ತು.