ಹಿಲಿಯಾಣ ಗರೋಡಿಯಲ್ಲಿಂದು ನೇಮೋತ್ಸವ

goli
Published on

ಗೋಳಿಯಂಗಡಿ: ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ನೇಮೋತ್ಸವ ಪ್ರಯುಕ್ತ ಮಾ.5ರಂದು ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ರಿಂದ ಶ್ರೀಬ್ರಹ್ಮ ಬೈದರ್ಕಳ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ಜರುಗಲಿದೆ. ಬಳಿಕ ಶಿವರಾಯನ ಗೆಂಡಸೇವೆ, ಪರಿವಾರ ದೈವಗಳ ಕೋಲ ನಡೆಯಲಿದೆ. 6ರಂದು ಸಂಜೆ 6ರಿಂದ ಗರೋಡಿಯಲ್ಲಿ ನಾಲ್ಕು ಗ್ರಾಮದವರಿಂದ ಮಹಾಮಾರಿ ಸೇವೆ ನೆರವೇರಲಿವೆ. ಗರೋಡಿ ಕ್ಷೇತ್ರಕ್ಕೆ 400 ವರ್ಷಗಳ ಇತಿಹಾಸವಿದ್ದು, ಹಿಲಿಯಾಣ, ಆವರ್ಸೆ, ನಂಚಾರು, ಹೆಸ್ಕುಂದ, ಹಳ್ಳಿ ಸಹಿತ ಸುತ್ತಮುತ್ತಲಿನ ಗ್ರಾಮಗಳಿಗೆ ಸೇರಿದೆ ಎಂದು ಗರೋಡಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ ಯರುಕೋಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net