ಗರ್ಲ್​ಫ್ರೆಂಡ್​ನ ಫಾಸ್ಟ್​ಫುಡ್​ ಬಯಕೆ ತೀರಿಸಲು 720 ಮೈಲು ಪ್ರಯಾಣಿಸಿದ ಬಾಯ್​ಫ್ರೆಂಡ್​! ಖರ್ಚು ಮಾಡಿದ್ದು ಎಷ್ಟು ಗೊತ್ತೇ?

gf
Published on

ಮಾಸ್ಕೋ: ಫಾಸ್ಟ್​ ಫುಡ್​, ಜಂಕ್​ ಫುಡ್​ ಬಗ್ಗೆ ಅನೇಕರಿಗಿರುವ ಚಪಲತೆಯನ್ನು ಈ ಲಾಕ್​ಡೌನ್​ ಕಡಿಮೆ ಮಾಡಿಸಿದೆ. ಹೊರಗಿನ ತಿಂಡಿ ತಿನ್ನಲಾಗದ ಅನೇಕರು ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲೇ ರುಚಿ ರುಚಿಯಾದ ಖಾದ್ಯ ತಯಾರಿಸಿಕೊಂಡು ತಿನ್ನಲು ಕಲಿತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನ ಗರ್ಲ್​ಫ್ರೆಂಡ್​ನ ಫಾಸ್ಟ್​ ಫುಡ್​ ಬಯಕೆ ತೀರಿಸಲೆಂದೇ ಬರೋಬ್ಬರಿ 710 ಮೈಲು ಪ್ರಯಾಣ ಮಾಡಿದ್ದಾನೆ.

ರಷ್ಯಾದ ಕೋಟ್ಯಧಿಪತಿ ವಿಕ್ಟರ್ ಮಾರ್ಟಿನೋವ್(33) ಗರ್ಲ್​ಫ್ರೆಂಡ್​ ಬಯಕೆ ತೀರಿಸಿರುವ ಪುಣ್ಯಾತ್ಮ. ಈತ ಇತ್ತೀಚೆಗೆ ಕ್ರೈಮಿಯಾದ ರೆಸಾರ್ಟ್​ ಒಂದರಲ್ಲಿ ತನ್ನ ಗರ್ಲ್​ಫ್ರೆಂಡ್​ ಅಲುಷ್ಟಾನೊಂದಿಗೆ ರಜೆಯಲ್ಲಿದ್ದರು. ಈ ಪ್ರದೇಶದಲ್ಲಿ ಪಾಶ್ಚಿಮಾತ್ಯ ಕಂಪನಿಗಳಿಗೆ ನಿರ್ಬಂಧವಿದೆ. ಯಾವೊಂದು ಮೆಕ್ಡೊನಾಲ್ಡ್ಸ್‌ಕೂಡ ಇಲ್ಲಿ ಕಾಣಸಿಗುವುದಿಲ್ಲ. ಆದರೆ ರಜಾವನ್ನು ಮಜವಾಗಿ ಕಳೆಯುತ್ತಿದ್ದ ಈ ಜೋಡಿಗೆ ಮೆಕ್ಡೊನಾಲ್ಡ್ಸ್‌ಖಾದ್ಯ ತಿನ್ನುವ ಮನಸ್ಸಾಗಿದೆ. ಬರ್ಗರ್​, ಫ್ರೈಸ್​ ತಿನ್ನಬೇಕೆಂಬ ಚಪಲ ಹುಟ್ಟಿದೆ. ಆ ಹಿನ್ನೆಲೆಯಲ್ಲಿ ತನ್ನ ಹೆಲಿಕಾಫ್ಟರ್ ಹತ್ತಿದೆ ವಿಕ್ಟರ್​ 720 ಮೈಲು ದೂರದಿಲ್ಲಿರುವ ಕ್ರಾಸ್ನೋಡರ್ನಗೆ ಹೋಗಿ ಅಲ್ಲಿಂದ ಬರ್ಗರ್​, ಫ್ರೈಸ್​ ಮತ್ತು ಮಿಲ್ಕ್​ಶೇಕ್​ ಕೊಂಡು ಬಂದಿದ್ದಾರೆ. ಇಷ್ಷೇ ಇಷ್ಟು ಖಾದ್ಯ ತರಲು ಸುಮಾರು 62,700 ರೂಪಾಯಿಯಷ್ಟು ಖರ್ಚು ಮಾಡಿದ್ದಾರೆ.

ಮೆಕ್ಡೊನಾಲ್ಡ್ಸ್‌ ಖಾದ್ಯ ಖರೀದಿಸಿದ ವಿಕ್ಟರ್​ ನಂತರ ಕೆಲವೇ ಗಂಟೆಯಲ್ಲಿ ಹೆಲಿಕಾಪ್ಟರ್​ ಮೂಲಕ ರೆಸಾರ್ಟ್​ಗೆ ವಾಪಾಸಗಿದ್ದು, ಅಲ್ಲಿ ಗರ್ಲ್​ಫ್ರೆಂಡ್​ ಜತೆ ಕುಳಿತು ರುಚಿಕರ ಖಾದ್ಯ ತಿಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net