More

    ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ

    ಮಂಡ್ಯ: ಅವರು ಊರಿಂದ ಊರಿಗೆ ಕಬ್ಬು ಕಟಾವು ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ರು. ಬಡತನದ ನಡುವೆಯೂ ತಮ್ಮ ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದ ಆ ಕುಟುಂಬದಲ್ಲಿ ಭಯಾನಕ ಘಟನೆ ನಡೆದುಹೋಗಿದೆ. ತಮ್ಮ ಜತೆಯಲ್ಲೇ ಕಬ್ಬು ಕಟಾವು ಮಾಡುತ್ತಿದ್ದ 12 ವರ್ಷದ ಮಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಅದಾದ ಕೆಲ ಕ್ಷಣಗಳಲ್ಲೇ ಮಗಳ ಚೀರಾಟ ಕೇಳಿ ಗಾಬರಿಯಿಂದ ಹೋಗಿ ನೋಡಿದ ಹೆತ್ತವರಿಗೆ ಕಂಡಿದ್ದು ಮಾತ್ರ ಭಯಾನಕ ದೃಶ್ಯ.

    ಆ ಬಾಲಕಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಳು. ಯಾವುದೋ ಪ್ರಾಣಿ ದಾಳಿ ಮಾಡಿರಬಹುದು ಅಂದುಕೊಂಡಿದ್ದವರಿಗೆ ಅಲ್ಲಿ ಕಂಡದ್ದು ಅವರು ಕೆಲಸ ಮಾಡುತ್ತಿದ್ದ ಸಮೀಪದ ಮನೆಯ 17 ವರ್ಷದ ಹುಡುಗ. ‘ನೀನ್ ಏನ್ ಮಾಡ್ತಿದ್ದೀಯಾ?’ ಎಂದು ಕೇಳಿದ್ರೆ ಗಾಬರಿಯಿಂದಲೇ ಉತ್ತರಿಸಿದ ಆತ, ‘ಯಾರೋ ಇಬ್ಬರು ನಿಮ್ಮ ಹುಡುಗಿಯನ್ನ ಹೊತ್ತುಕೊಂಡು ಹೋಗುತ್ತಿದ್ದರು. ಆಕೆಯನ್ನು ಅವರಿಂದ ಬಿಡಿಸಲು ಹೋಗಿ ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ’ ಎಂದಿದ್ದ. ಆತನ ಶರ್ಟ್​ ಮೇಲೂ ರಕ್ತದ ಕಲೆಯಾಗಿತ್ತು. ಬಳಿಕ ಮನೆಗೆ ಹೋಗಿ ಶರ್ಟ್ ಬದಲಾಯಿಸಿಕೊಂಡು ಮತ್ತೆ ಕಬ್ಬಿನ ಗದ್ದೆ ಬಳಿಗೆ ಬಂದಿದ್ದ. ಅಂದಹಾಗೆ ಈ ಘಟನೆ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

    ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ರೈತರಿಗೆ ತಾವು ಬೆಳೆದ ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗಲ್ಲ. ಹಾಗಾಗಿ ಬಳ್ಳಾರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳಲಾಗುತ್ತದೆ. ಹೀಗೆ ಕಬ್ಬು ಕಟಾವು ಮಾಡುವ ಕೆಲಸಕ್ಕಾಗಿ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಬಸ್ಸಾಪುರ ತಾಂಡಾದ ಲೇಟ್ ಪಾಂಡುನಾಯಕ ಮತ್ತು ಶಶಿಕಲಾ ಕುಟುಂಬವೂ ಬಂದಿದೆ. ಇದೀಗ ಈ ದಂಪತಿಯ ಮಗಳೇ ಕೊಲೆಯಾಗಿರುವುದು. ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲೇ ಬೀಡುಬಿಟ್ಟಿದ್ದ ಈ ಕುಟುಂಬ ಸದ್ಯ ಹುರುಗಲವಾಡಿ ಗ್ರಾಮದ ಚೆಲುವರಾಜು ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿತ್ತು. ಎಂದಿನಂತೆ ನಿನ್ನೆಯೂ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಮಗಳು ದುರಂತ ಅಂತ್ಯಕಂಡಿದ್ದಾಳೆ.

    ಕಬ್ಬಿನ ಗದ್ದೆಯಲ್ಲಿ ಬಾಲಕಿ ಭೀಕರ ಹತ್ಯೆಯಾಗಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಲೆ ನಡೆದ ಸ್ಥಳದಲ್ಲಿ ಅಪ್ರಾಪ್ತ ಬಾಲಕ ಅವಿತು ಕುಳಿತುಕೊಂಡಿದ್ದ ವಿಚಾರ ಗೊತ್ತಾಗಿ ಆತನನ್ನು ಕೊಪ್ಪ ಪೊಲೀಸರು ವಿಚಾರಣೆ ನಡೆಸಿದಾಗಲೂ ಅಸ್ಪಷ್ಟ ಮಾಹಿತಿ ನೀಡುತ್ತಿದ್ದ. ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

    ವಿಚಾರಣೆ ವೇಳೆ ಆ ಬಾಲಕ ತಪ್ಪೊಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆತ್ತವರೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಸರ್ಕಾರದ 2 ಲಕ್ಷ ರೂ. ಪರಿಹಾರ ಪಡೆಯಲು ಯಾರೂ ಇಲ್ಲ..! ಇದ್ದರೆ ದಯವಿಟ್ಟು ಸಂಪರ್ಕಿಸಿ

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts