More

    ತ್ರಿವಿಕ್ರಮ ಟೀಸರ್ ರಿಲೀಸ್; ಮಾಸ್ ಅವತಾರದಲ್ಲಿ ಜೂ. ರವಿಚಂದ್ರನ್​ ಎಂಟ್ರಿ..

    ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಮಗ ವಿಕ್ರಮ್ ರವಿಚಂದ್ರನ್ ಚಿತ್ರರಂಗಕ್ಕೆ ‘ತ್ರಿವಿಕ್ರಮ’ನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣವೂ ಮುಗಿದಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಆಡಿಯೋ ಹಕ್ಕುಗಳ ಮಾರಾಟದ ಮೂಲಕ ಸದ್ದು ಮಾಡಿದ್ದ ತ್ರಿವಿಕ್ರಮ ಸಿನಿಮಾ, ಇದೀಗ ಟೀಸರ್​ ಮೂಲಕ ಸುದ್ದಿ ಮಾಡುತ್ತಿದ್ದಾನೆ. ಇಂದು ತ್ರಿವಿಕ್ರಮ್​ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮಾಸ್​ ಅವತಾರದಲ್ಲಿ ಎದುರಾಗಿದ್ದಾರೆ.

    ಇದನ್ನೂ ಓದಿ: ಹೆಡ್-ಬುಷ್ ಆಡ್ತಿದ್ದಾರೆ ಧನಂಜಯ್: ಆರು ಭಾಷೆಗಳಲ್ಲಿ ಜಯರಾಜ್​ನ ದಾದಾಗಿರಿಯ ದಿನಗಳು

    ಒಂದು ನಿಮಿಷ 26 ಸೆಕೆಂಡ್​ನ ಟೀಸರ್​ನಲ್ಲಿ ವಿಕ್ರಮ್​ ರವಿಚಂದ್ರನ್​ ಅವರ ಮಾಸ್​ ಎಂಟ್ರಿ, ರಾಜಸ್ತಾನದ ಒಂಟೆ ರೇಸಿಂಗ್​, ಬೈಕ್​ನ ಗಾಲಿಗೆ ಬೆಂಕಿ ಹೊತ್ತಿಸಿ, ಅದರಲ್ಲಿ ವೀಲಿಂಗ್​ ಮಾಡುವ ಭಂಗಿಯಲ್ಲಿ ವಿಕ್ರಮ್​ ಮಾಸ್​ ಹೀರೋ ಲುಕ್​ನಲ್ಲಿ ಮಿಂಚಿದ್ದಾರೆ. ಇದು ಅವರ ಬರ್ತ್​ಡೇ ಪ್ರಯುಕ್ತ ಬಿಡುಗಡೆ ಮಾಡಿರುವ ಟೀಸರ್ ಆಗಿದ್ದು, ಯಾವುದೇ ಡೈಲಾಗ್ ಇಲ್ಲ. ಇನ್ನೊಂದು ವಿಶೇಷ ಏನೆಂದರೆ ಟೀಸರ್​​ನಲ್ಲಿ ಹಿನ್ನೆಲೆ ಸಂಗೀತಕ್ಕೂ ಪ್ರಾಮುಖ್ಯತೆ ನೀಡಿರುವ ಸಂಗೀತ ನಿರ್ದೇಶಕರು, ನಾಯಕನ ಎಂಟ್ರಿಗೆ ಥ್ರಿಲ್​ ಎನಿಸೋ ಮ್ಯೂಸಿಕ್​ ಕೊಟ್ಟಿದ್ದಾರೆ.

    ಸೋಮಣ್ಣ ನಿರ್ಮಾಣದ, ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಸಿನಿಮಾ ಹಾಡುಗಳ ಹಕ್ಕುಗಳು 50ಲಕ್ಷಕ್ಕೆ ಮಾರಾಟವಾಗಿದ್ದು, ಇದು ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿತ್ತು. ಎ2 ಮ್ಯೂಸಿಕ್ ಸಂಸ್ಥೆ ಈ ಹಕ್ಕುಗಳನ್ನು ಪಡೆದುಕೊಂಡಿತ್ತು, ಇದೀಗ ಅದೇ ಯೂಟ್ಯೂಬ್​ ಚಾನೆಲ್​ನಲ್ಲಿ ಟೀಸರ್ ರಿಲೀಸ್ ಆಗಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. 2021ಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.

    ಇದನ್ನೂ ಓದಿ: ಸಿನಿ ಸ್ವಾತಂತ್ರ್ಯ: ಸೋಷಿಯಲ್ ಮೀಡಿಯಾದಲ್ಲಿ ತಾರೆಯರ ಸಂಭ್ರಮ

    ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಒಟ್ಟು 6 ಹಾಡುಗಳು ಮೂಡಿಬಂದಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಹರಿಚರಣ್, ಶ್ರೇಯಾ ಘೋಶಾಲ್, ಸಿದ್ ಶ್ರೀರಾಮ್ ಮುಂತಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

    ರೀಲ್ ಧೋನಿ ಮತ್ತು ರಿಯಲ್​ ಧೋನಿಯನ್ನು ಅಭಿಮಾನಿಗಳು ಹೇಗೆಲ್ಲ ನೆನಪಿಸಿಕೊಳ್ಳುತ್ತಿದ್ದಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts