ರಾಜಸ್ಥಾನ ರಾಯಲ್ಸ್​ ಬ್ಯಾಟಿಂಗ್​ ಕೋಚ್​ ಆಗಿ ವಿಕ್ರಮ್ ರಾಥೋರ್ ನೇಮಕ

Vikram Rathour
Published on

ಜೈಪುರ: 18ಣೇ ಆವೃತ್ತಿಯ ಐಪಿಎಲ್​ನಲ್ಲಿ ಕಪ್​ ಗೆಲ್ಲಲೇಬೇಕೆಂಬ ಹಂಬಲದೊಂದಿಗೆ ಈಗಾಗಲೇ ಭರ್ಜರಿ ತಯಾರಿ ನಡೆಸಿರುವ ರಾಜಸ್ಥಾನ ರಾಯಲ್ಸ್​ ಕ್ರಿಕೆಟ್​ ತಂಡವು ಅದಕ್ಕೆ ಮುನ್ನುಡಿ ಎಂಬಂತೆ ಈಗಾಗಲೇ ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ರನ್ನು ತಂಡದ ಮುಖ್ಯ ತರಬೇತುದಾರರಾಗಿ ನೇಮಿಸಿದ್ದು, ಇದೀಗ ಬ್ಯಾಟಿಂಗ್​ ಕೋಚ್​ಅನ್ನು ಕೂಡ ನೇಮಿಸಲಾಗಿದೆ.

ಭಾರತ ಕ್ರಿಕೆಟ್​ ತಂಡದ ಮಾಜಿ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ರನ್ನು, ಇದೀಗ ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿಯೂ ಬ್ಯಾಟಿಂಗ್​ ಕೋಚ್​ ಆಗಿ ನೇಮಿಸಿದ್ದು, ದ್ರಾವಿಡ್​-ರಾಥೋರ್​ ಜೋಡಿ ಮತ್ತೊಮ್ಮೆ ಕಮಾಲ್​ ಮಾಡಲು ಸಜ್ಜಾಗಿದೆ.

ಹಲವು ವರ್ಷಗಳಿಂದ ವಿಕ್ರಮ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು, ಅವರ ತಾಂತ್ರಿಕ ಪರಿಣಿತಿ, ಶಾಂತ ವರ್ತನೆ ಮತ್ತು ಪರಿಸ್ಥಿತಿಗಳ ಆಳವಾದ ತಿಳುವಳಿಕೆಯು ಅವರನ್ನು ರಾಯಲ್ಸ್‌ಗೆ ಪರಿಪೂರ್ಣವಾಗಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೇಒಟ್ಟಾಗಿ, ನಾವು ಬಲವಾದ ಬಾಂಧವ್ಯವನ್ನು ನಿರ್ಮಿಸಿದ್ದು, ಭಾರತದ ಪ್ರಮುಖ ಯಶಸ್ಸಿನಲ್ಲಿ ನಾವು ಮಾರ್ಗದರ್ಶನ ಮಾಡಿದ್ದೇವೆ.

ಅವರೊಂದಿಗೆ ಮತ್ತೆ ಒಂದಾಗಲು ನಾನು ರೋಮಾಂಚನಗೊಂಡಿದ್ದೇನೆ. ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸುವ ಅವರ ಗುಣವು ನಮ್ಮ ತಂಡವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದೇವೆ. ವಿಶ್ವದರ್ಜೆ ತಂಡವನ್ನು ಕಟ್ಟಲಿದ್ದೇವೆ ಎಂದು ಎಂದು ಟೀಮ್​ ಇಂಡಿಯಾದ ಮಾಜಿ ಕೋಚ್​, ರಾಜಸ್ಥಾನ ರಾಯಲ್ಸ್​ ತಂಡದ ನೂತನ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net