ದರ್ಶನ್​ ಪ್ರಕರಣ ವೈಯಕ್ತಿಕ, ಚಿತ್ರರಂಗಕ್ಕೆ ಸಂಬಂಧವಿಲ್ಲ: ಗುರುಕಿರಣ್​

Darshan Gurukiran

ಮಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ 100ಕ್ಕೂ ಅಧಿಕ ದಿನಗಳಾಗಿದ್ದು, ಬಳ್ಳಾರಿ ಜೈಲಿನಲ್ಲಿ ದಿನದೂಡುತ್ತಿದ್ದಾರೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​ ಆರೋಪಿಗಳ ಪಾಲಿಗೆ ದೊಡ್ಡ ಉರುಳಾಗಿ ಪರಿಣಮಿಸಿದ್ದು, ಸದ್ಯಕ್ಕೆ ಬೇಲ್​ ಸಿಗುವುದು ಡೌಟ್​ ಎಂದು ಹೇಳಲಾಗುತ್ತಿದೆ.

ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್​ನಟನೊಬ್ಬನ ಈ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ದರ್ಶನ್​ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ. ಸ್ಯಾಂಡಲ್​ವುಡ್​ಮನ ಸ್ಟಾರ್ ನಟ, ನಟಿ, ನಿರ್ದೇಶಕರು,ನಿರ್ಮಾಪಕರು ಕೂಡು ಈ ಬಗ್ಗೆ ಮಾತನಾಡುತ್ತಿದ್ದು, ಇದೀಗ ಸಂಗೀತ ನಿರ್ದೆಶಕ ಗುರುಕಿರಣ್​ ಪ್ರಕರಣದ ಬಗ್ಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

darshan

ಇದನ್ನೂ ಓದಿ: ನಮ್ಮಲ್ಲಿ ಲ್ಯಾಬ್​ ಇಲ್ಲದಿರುವುದೇ ಪೂರೈಕೆದಾರರು ಲಾಭ ಪಡೆಯಲು ಕಾರಣವಾಯ್ತು: TTD

ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗುರುಕಿರಣ್​, ನಟ ದರ್ಶನ್​ ಪ್ರಕರಣ ವೈಯಕ್ತಿಕ ಅದು ಶೂಟಿಂಗ್​​ ಸೆಟ್​ನಲ್ಲಿ ನಡೆದಿದ್ದಲ್ಲ. ಅದಕ್ಕೂ ಚಿತ್ರಂಗಕ್ಯಾಕೂವುದೇ ಸಂಬಂಧವಿಲ್ಲ. ಸ್ನೇಹಿತನಾಗಿ ದರ್ಶನ್​ ಹೊರಗೆ ಬರಬೇಕು ಅಂತ ನಾವು ಹೇಳುತ್ತೇವೆ. ಆದರೆ ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ನಾವು ಅದನ್ನು ಪಾಲಿಸಬೇಕಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಚಾರ್ಜ್​ಶೀಟ್​ ಫೈಲ್​ ಮಾಡಿದ ರೀತಿ ನಾವು ನೋಡಿದ್ದೇವೆ. ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ. ಆತ ಹೊರಗೆ ಬಂದರೆ ನಮಗೆ ಖುಷಿಯಾಗುತ್ತದೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್​ ಮಂಗಳೂರಿನಲ್ಲಿ ಹೇಳಿದ್ದಾರೆ.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…