

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಸ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಎದುರು ಮೇಲುಗೈ ಸಾಧಿಸಿದ್ದು, ಬೃಹತ್ ಸ್ಕೋರ್ನತ್ತ ದಾಪುಗಾಲಿರಿಸಿದೆ. ಬಾಂಗ್ಲಾದ ಎದುರು ಟೀಮ್ ಇಂಡಿಯಾದ ಗೆಲುವು ಖಚಿತವಾಗುತ್ತಿದ್ದಂತೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮಾಡಿದ ಆ ಒಂದು ಎಡವಟ್ಟು ನಾಯಕ ರೋಹಿತ್ ಶರ್ಮ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಬಾಂಗ್ಲಾ ಎದುರು ಎರಡನೇ ಇನ್ನಿಂಗ್ಸ್ನಲ್ಲಿ 36 ಬಾಲ್ ಎದುರಿಸಿ ಎರಡು ಬೌಂಡರಿ ಸಮೇತ 17 ರನ್ ಗಳಿಸಿದ್ದರು. ಈ ವೇಳೆ ಸ್ಪಿನ್ನರ್ ಮೆಹ್ದಿ ಹಸನ್ ಮಿರಾಜ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಆದರೆ,ಅದು ಬ್ಯಾಟ್ಗೆ ತಗುಲಿರುವ ಕಾರಣ ನಾಟ್ಔಟ್ ಎಂದು ಸಾಬೀತಾಗಿದ್ದು, ಕೊಹ್ಲಿ ನಡೆಯ ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ನಾಯಕ ರೋಹಿತ್ ಶರ್ಮ ಕೂಡ ವಿರಾಟ್ ವಿರುದ್ಧ ಕಿಡಿಕಾರಿದ್ದಾರೆ.
ಎರಡನೇ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರ ಇನಿಂಗ್ಸ್ 17 ರನ್‌ಗಳಿಗೆ ಸೀಮಿತವಾಯಿತು. ಸ್ಪಿನ್ನರ್ ಮೆಹ್ದಿ ಹಸನ್ ಮಿರಾಜ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಪೆವಿಲಿಯನ್ತ್ತ ನಡೆದರು. ವಿಡಿಯೋ ರಿಪ್ಲೇ ಮಾಡಿ ನೋಡಿದಾಗ ವಿರಾಟ್ ಕೊಹ್ಲಿ ಅವರ ಬ್ಯಾಟ್‌ನ ಅಂಚಿಗೆ ಚೆಂಡು ಕೊಂಚ ತಾಗಿರುವುದು ಕಂಡು ಬಂದಿದೆ. ನಾನ್ ಸ್ಟ್ರೈಕ್‌ನಲ್ಲಿ ಇದ್ದ ಯುವ ಬ್ಯಾಟರ್ ಶುಭಮನ್ ಗಿಲ್ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದರೂ.
ಅದು ಔಟ್ ಎಂದು ಖುದ್ದು ಬಲವಾಗಿ ನಂಬಿದ್ದ ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಹಿಂದಿರುಗಿದರು. ಬಳಿಕ ಟೆಲಿವಿಷನ್ ರಿಪ್ಲೇನಲ್ಲಿ ಕೊಹ್ಲಿ ನಾಟ್ ಔಟ್ ಆಗಿರುವುದು ಬೆಳಕಿಗೆ ಬಂದಿತು. ಇದನ್ನು ಕಂಡ ಶುಭಮನ್ ಗಿಲ್ ಬೇಸರಗೊಂಡರೆ, ಡಗ್‌ಔಟ್‌ನಲ್ಲಿ ಕುಳಿತಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ವಿರಾಟ್ ನಡೆಗೆ ಕಿಡಿಕಾರಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ 6 ರನ್ ಗಳಿಸಿ ವೇಗಿ ಹಸನ್ ಮಹ್ಮೂದ್‌ಗೆ ವಿಕೆಟ್ ಒಪ್ಪಿಸಿದ್ದ ವಿರಾಟ್ ಕೊಹ್ಲಿ, ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಇನಿಂಗ್ಸ್ ಆಡುವ ಲೆಕ್ಕಾಚಾರದಲ್ಲಿ ಏಕಾಗ್ರತೆಯಿಂದ ಬ್ಯಾಟ್ ಮಾಡಿದ್ದರು. ಎದುರಿಸಿದ 37 ಎಸೆತಗಳಲ್ಲಿ 2 ಫೋರ್‌ಗಳ ನೆರವಿನಿಂದ 17 ರನ್ ಗಳಿಸಿದ್ದಾಗ ಭಾರತ ತಂಡದ 2ನೇ ಇನಿಂಗ್ಸ್‌ನ 20ನೇ ಓವರ್‌ನಲ್ಲಿ ವಿಕೆಟ್ ಕೈಚೆಲ್ಲಿದರು.