VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು

prof siddu alaguru in vijayavani Phone In program 7 MAY 20
Published on

ಬಳ್ಳಾರಿ: ಲಾಕ್‌ಡೌನ್ ಮುಗಿದ ತಕ್ಷಣ ತರಗತಿ ಪ್ರಾರಂಭಿಸಿಯೇ ಪರೀಕ್ಷೆ ತೆಗೆದುಕೊಳ್ಳಲಾಗುವುದು.ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಎದೆಗುಂದದೆ ಓದಿನ ಕಡೆಗೆ ಚಿತ್ತಹರಿಸಿ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಅಲಗೂರು ಹೇಳಿದರು.

ನಗರದ ವಿಜಯವಾಣಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಿಂದ ಕರೆ ಮಾಡಿದ್ದ ಪ್ರತಿಯೊಂದು ವಿದ್ಯಾರ್ಥಿಯು ಪ್ರಮುಖವಾಗಿ ತರಗತಿ ಯಾವಾಗ ಆರಂಭವಾಗಲಿದೆ.ಪರೀಕ್ಷೆ ಯಾವಾಗ ತೆಗೆದುಕೊಳ್ಳುತ್ತೀರಿ..? ಲಾಕ್ ಡೌನ್ ಮುಗಿದ ತಕ್ಷಣ ತರಗತಿ ನಡೆಸಿದರೇ ಅನುಕೂಲವಾಗುತ್ತದೆ ಎಂದು ಕುಲಪತಿಗಳ ಬಳಿ ಅವಲತ್ತುಕೊಂಡರು.

ಕುಲಪತಿ ಪ್ರೊ.ಸಿದ್ದು ಅಲಗೂರು ಕೂಡ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿವಿದ್ಯಾರ್ಥಿಗಳಲ್ಲಿದ್ದ ಭಯವನ್ನು ಹೋಗಲಾಡಿಸಿ ಧೈರ್ಯ ತುಂಬಿದರು.ಬೆಳಗ್ಗೆ 11ಗಂಟೆಗೆ ಆರಂಭವಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಬಿಡುವಿಲ್ಲದ ಕರೆಗಳಿಗೆ ಕುಲಪತಿಗಳು ಉತ್ತರಿಸಿದರು.ಕುಲಸಚಿವರಾದ ತುಳಸಿಮಾಲಾ, ರಮೇಶ ಕೂಡ ಕುಲಪತಿಗಳ ಜತೆ ಪಾಲ್ಗೊಂಡು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net